ಕುಣಿಗಲ್ : ರಸ್ತೆ ಪಕ್ಕದಲ್ಲಿ ಹಾಕಿದ್ದ ಸಿಗ್ನಲ್ ಕಂಬಕ್ಕೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಬಿ.ಎಂ ರಸ್ತೆ ಸಿದ್ದಪುರ ಹೆಚ್.ಪಿ.ಪೆಟ್ರೋಲ್ ಬಂಕ್ ಸಮೀಪ ಸಂಭವಿಸಿದೆ.
ಮೂಲತಃ ನಾಗಮಂಗಲ ತಾಲೂಕು ದೇವಲಪುರ ಹೋಬಳಿ ಮುತ್ತಸಂದ್ರ ಗ್ರಾಮ ಹಾಲಿ ಬೆಂಗಳೂರು ಗಾಯಿತ್ರಿನಗರ ವಾಸಿ ಡಿ.ಸಂಜಯ್ (28) ಮೃತ ಯುವಕ.
ಸಂಜಯ್ ಒಂದು ವರೆ ವರ್ಷದ ಹಿಂದೆ ಬೆಂಗಳೂರಿನ ವಿದ್ಯಾ ಎಂಬ ಯುವತಿಯನ್ನು ಮದುವೆಯಾಗಿ, ಬೆಂಗಳೂರಿನಲ್ಲಿ ವಾಸವಾಗಿದ್ದ, ಶನಿವಾರ ಕೆಲಸದ ನಿಮತ ಸಂಜಯ್ ಬೆಂಗಳೂರು ಗಾಯಿತ್ರನಗರದ ನಿವಾಸದಿಂದ ಬೈಕ್‌ನಲ್ಲಿ ತನ್ನ ಸ್ವಾಗ್ರಾಮ ಮುತ್ತಸಂದ್ರಕ್ಕೆ ಹೋಗುತ್ತಿರಬೇಕಾದರೆ, ಸಿದ್ದಪುರ ಹೆಚ್.ಪಿ.ಪೆಟ್ರೋಲ್ ಬಂಕ್ ಬಳಿ ಈ ಅವಘಡ ಸಂಭವಿಸಿದೆ, ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.