ಕುಣಿಗಲ್ : ಸಿಮೆಂಟ್ ತುಂಬಿದ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ್ನು ಸ್ಥಳದಲ್ಲೇ ಭೀಕರವಾಗಿ ಮೃತಪಟ್ಟಿರುವ ಘಟನೆ ರಾಜ್ಯ ಹೆದ್ದಾರಿ 33 ರ ಟಿ.ಎಂ ರಸ್ತೆ ದೊಡ್ಡಮಲಳವಾಡಿ ಸಮೀಪ ಭಾನುವಾರ ಸಂಜೆ ಸಂಬವಿಸಿದೆ.
ತುಮಕೂರಿನ ಶಿರಾ ಗೇಟ್ ವಾಸಿ ರಂಗನಾಥ್ (23) ಮೃತ ದುರದೈವಿ.
ರಂಗನಾಥ ಮೂಲತಃ ಬಡಗಿ ಕೆಲಸ ಮಾಡುತ್ತಿದ್ದು ಆತನ್ನು ಹಾಗೂ ಆತನ ಸ್ನೇಹಿತ ಬೆಂಗಳೂರಿನ ವಾಸಿಂ ಕುಣಿಗಲ್ ಗೆ ಬಂದು ದ್ಬಿಚಕ್ರವಾಹನದಲ್ಲಿ ತಮ್ಮ ಊರಿಗೆ ವಾಪಸ್ಸ್ ಆಗುತ್ತಿರ ಬೇಕಾದರೆ ಈ ಅವಘಡ ಸಂಬವಿಸಿದ ಎನ್ನಲಾಗಿದೆ, ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ :ಭಾರತದ ಶೇ.99 ರಷ್ಟು ಮುಸ್ಲಿಮರು ಹಿಂದೂಸ್ಥಾನಿಗಳು : ಇಂದ್ರೇಶ್ ಕುಮಾರ್