ಕುಣಿಗಲ್ : ಲಾರಿ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ರಾಜ್ಯ ಹೆದ್ದಾರಿ 33 ಟಿ.ಎಂ ರಸ್ತೆ ಬೀಸೆಗೌಡನದೊಡ್ಡಿ ಗ್ರಾಮದ ಬಳಿ ಶನಿವಾರ ರಾತ್ರಿ ಸುಮಾರು ಏಳರ ಸಮಯದಲ್ಲಿ ಸಂಭವಿಸಿದೆ.
ಕುಣಿಗಲ್ ಪಟ್ಟಣದ ಕೆಆರ್ಎಸ್ ಆಗ್ರಹಾರದ ಟ್ಯಾಂಕರ್ ಮೆಕ್ಯಾನಿಕ್ ಜಬಿಉಲ್ಲಾ (29) ಮೃತ ವ್ಯಕ್ತಿ.
ಜಬಿಉಲ್ಲಾ ಕುಣಿಗಲ್ನಿಂದ ಬೈಕ್ನಲ್ಲಿ ತನ್ನ ಹೆಂಡತಿ ಮನೆ ಮಂಡ್ಯಗೆ ಹೋಗುತ್ತಿರಬೇಕಾದರೆ, ಮದ್ದೂರು ಕಡೆಯಿಂದ ಬಂದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಜಬಿಉಲ್ಲಾ ತೀವ್ರವಾಗಿ ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೋಯ್ಯುವ ಮಾರ್ಗ ನೆಲಮಂಗಲ ಬಳಿ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಮದಿಸಿದ ಆನೆಯಂತಾಗಿದೆ ಮಾಧ್ಯಮ: ಡಾ.ರಹಮತ್ ತರೀಕೆರೆ ವಿಷಾದ