ಕುಣಿಗಲ್: ಡಿನ್ನರ್ ಸೆಟ್ ಬಾಕ್ಸ್ ಗಳನ್ನು ಜನರಿಗೆ ಹಂಚುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ಡಿನ್ನರ್ ಬಾಕ್ಸ್ ಹಾಗೂ ಕಂಟೇನರ್ ಅನ್ನು ವಶಕ್ಕೆ ಪಡಿಸಿಕೊಂಡಿರುವ ಘಟನೆ ತಾಲೂಕು ಹುತ್ರಿದುರ್ಗ ಹೋಬಳಿ ಯಲಿಯೂರು ಗ್ರಾಮದಲ್ಲಿ ನಡೆದಿದೆ.
ಶಾಸಕ ಡಾ.ಹೆಚ್.ಡಿ.ರಂಗನಾಥ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ಭಾವ ಚಿತ್ರ ಹೊಂದಿರುವ ಡಿನ್ನರ್ ಸೆಟ್ ಗಳನ್ನು ಕೆಲ ವ್ಯಕ್ತಿಗಳು ಯಲಿಯೂರು ಗ್ರಾಮದಲ್ಲಿ ಜನರಿಗೆ ಹಂಚುತ್ತಿದ್ದರು ಎನ್ನಲಾಗಿದ್ದು ಈ ಸಂಬಂಧ ಚಲುವೇಗೌಡನ ದೂರಿನ ಮೇರೆಗೆ ತಾಲೂಕು ಕಚೇರಿ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಂಟೇನರ್ ಹಾಗೂ ಕೆಲ ಡಿನ್ನರ್ ಸೆಟ್ ಗಳನ್ನು ವಶ ಪಡಿಸಿಕೊಂಡಿದ್ದಾರೆ, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಯಲಿಯೂರು ಗ್ರಾಮದಲ್ಲಿ ಜನರಿಗೆ ವಸ್ತುಗಳನ್ನು ವಿತರಣೆ ಮಾಡುತ್ತಿದ್ದಾರೆ ಎಂದು ದೂರು ಬಂದ ಕಾರಣ ನಮ್ಮ ಇಲಾಖೆಯ ಅಧಿಕಾರಿಗಳು ಕಂಟೇನರ್ ವಶ ಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಈ ಸಂಬಂಧ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
– ತಹಶೀಲ್ದಾರ್ ಮಹಬಲೇಶ್ವರ