Advertisement

ಕುಣಿಗಲ್: ನೀರಿನಲ್ಲಿ ನಾಲ್ವರು ಕೊಚ್ಚಿಹೋದ ಪ್ರಕರಣ; 2 ಮೃತದೇಹ ಪತ್ತೆ, ಮುಂದುವರಿದ ಶೋಧಕಾರ್ಯ

08:34 PM Nov 29, 2021 | Team Udayavani |

ಕುಣಿಗಲ್ : ಮಾರ್ಕೋನಹಳ್ಳಿ ಜಲಾಶಯದ ಎಡ ಹಾಗೂ ಬಲ ಕೋಡಿ ಹಳ್ಳ ಸಮೀಪ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ನಾಲ್ವರ ಪೈಕಿ ಇಬ್ಬರ ಮೃತದೇಹಗಳು ಮಾತ್ರ ಸಿಕ್ಕಿದ್ದು ಉಳಿದಿಬ್ಬರ ಮೃತದೇಹಗಳ ಶೋಧ ಕಾರ್ಯಚರಣೆ ಮುಂದುವರಿದಿದೆ.

Advertisement

ಮಾರ್ಕೊನಹಳ್ಳಿ ಜಲಾಶಯಕ್ಕೆ ಭಾನುವಾರ ಮಧ್ಯಾಹ್ನ ದಿಢೀರ್ 2500 ಕ್ಯೂಸೆಕ್ಸ್ ಒಳ ಹರಿವು ಹೆಚ್ಚಾಗಿ, ಜಲಾಶಯ ತುಂಬಿದ್ದ ಹಿನ್ನಲೆಯಲ್ಲಿ ಅಷ್ಟೇ ಪ್ರಮಾಣದ ನೀರು ಜಲಾಶಯದಿಂದ ಹೊರ ಹರಿದಿದ್ದು, ಜಲಾಶಯದ ಕೋಡಿ ಹಳ್ಳದ ಸಮೀಪ ನೀರಿನಲ್ಲಿ ಅಟವಾಡುತ್ತಿದ್ದಾಗ ನಾಲ್ವರು ಕೊಚ್ಚಿ ಹೋಗಿದ್ದರು.

ಐದು ತಂಡಗಳ ಕಾರ್ಯಚರಣೆ : ಆಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಬೆಂಗಳೂರು ಎನ್‌ಡಿಆರ್‌ಎಫ್ ತಂಡದ ದಿಂದ ಮೃತದೇಹಗಳ ಶೋಧ ಕಾರ್ಯಚರಣೆ ನಡೆಸಲಾಗುತ್ತಿದೆ. ಸೋಮವಾರ ಕಾರ್ಯಚರಣೆಯಲ್ಲಿ ಎರಡು ಮೃತ ದೇಹಗಳು ಮಾತ್ರ ಪತ್ತೆಯಾಗಿವೆ. ಉಳಿದ ಎರಡು ದೇಹಗಳ ಪತ್ತೆಗೆ ಶೋಧ ಕಾರ್ಯಚರಣೆ ಮುಂದುವರಿದಿದೆ. ಕುಣಿಗಲ್ ಕೋಟೆ ಬಡವಾಣೆಯ ನಿವಾಸಿ ಸಾಧೀಕಾ ಭಾನು ಹಾಗೂ ಎಡಿಯೂರು ಬೀರಗಾನಹಳ್ಳಿ ಗ್ರಾಮದ ಅಪ್ಪು ಎಂಬವರ ಮೃತದೇಹಗಳು ಪತ್ತೆಯಾಗಿದ್ದು, ಮಾರ್ಕೋನಹಳ್ಳಿ ಕೋಡಿ ಹಳ್ಳದಿಂದ ಅರ್ಧ ಕಿ.ಮೀ ದೂರದಲ್ಲಿ ಪತ್ತೆಯಾಗಿವೆ. ಸೋಮವಾರ ಸುಮಾರು 5 ಕಿ. ಮೀ ವರೆಗೂ ಬೋಟ್‌ಗಳನ್ನು ಬಳಸಿ ಐದು ತಂಡಗಳು ಕಾರ್ಯಚರಣೆ ನಡೆಸಿದರು ಉಳಿದ ಕೋಟೆ ಪ್ರದೇಶ ಪರ್ವೀನ್ ತಾಜ್ ಹಾಗೂ ಎಡಿಯೂರು ಬೀರಗಾನಹಳ್ಳಿ ಗ್ರಾಮದ ರಾಜು ಇಬ್ಬರ ಮೃತ ದೇಹಗಳು ಪತ್ತೆಯಾಗಿಲ್ಲ.

ಇದನ್ನೂ ಓದಿ : ಸಂಸದೆಯರೊಂದಿಗಿನ ಟ್ವೀಟ್ ವೈರಲ್: ಶಶಿ ತರೂರ್ ಕ್ಷಮೆ ಕೇಳಿದ್ದೇಕೆ ?

ಕಾರ್ಯಾಚರಣೆ ಸ್ಥಗಿತ : ಸಂಜೆ ಆರು ಗಂಟೆವರೆಗೂ ಕಾರ್ಯಚರಣೆ ನಡೆಸಿ ತಂಡ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿ ಮಂಗಳವಾರಕ್ಕೆ ಮುಂದೂಡಿದೆ. ಪ್ರದೇಶಿಕ ಅಗ್ನಿಶಾಮಕ ಅಧಿಕಾರಿ ಎನ್.ನರಸಿಂಹಮೂರ್ತಿ, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಮಹದೇವಪ್ಪ ಲಂಗೋಟಿ, ಕುಣಿಗಲ್ ಅಗ್ನಿಶಾಮಕ ಅಧಿಕಾರಿ ಕೆ.ಸಿ.ಗೋವಿಂದಪ್ಪ ಹಾಗೂ ಸಿಬ್ಬಂದಿಗಳು ಹಾಗೂ ಬೆಂಗಳೂರಿನ ಎನ್‌ಡಿಆರ್‌ಎಫ್ ತಂಡ ಜಂಟಿಯಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೊದವರ ಪತ್ತೆಗಾಗಿ ಎರಡು ದಿನಗಳಿಂದ ತೀವ್ರ ಕಾರ್ಯಚರಣೆ ನಡೆಸಿದ್ದಾರೆ. ಕತ್ತಲೆಯಾದ ಕಾರಣ ಕಾರ್ಯಚರಣೆಯನ್ನು ಸ್ಥಗಿತಗೊಳಿಸಲಾಗಿದೆ, ಪ್ರಕರಣ ನಾಗಮಂಗಲ ಠಾಣೆಯಲ್ಲಿ ದಾಖಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next