ಕುಣಿಗಲ್: ಕುರಿ ಮಂದಿ ಮೇಲೆ ಲಾರಿ ಹರಿದು, ಸ್ಥಳದಲ್ಲಿಯೇ 60 ಕುರಿ ಮೃತಪಟ್ಟು 20 ಕುರಿ ಗಾಯಗೊಂಡಿರುವ ಘಟನೆ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 75 ರ ಗವಿಮಠ ಬಳಿ ನಡೆದಿದೆ.
ಆಂದ್ರಪ್ರದೇಶ ಮಡಕಶಿರಾ ತಾಲೂಕು ರಾಮಯ್ಯನಹಟ್ಟಿ ಗ್ರಾಮದ ಡೊಡ್ಡಹೀರಪ್ಪ ಕುರಿ ಕಳೆದುಕೊಂಡ ರೈತ.
ಘಟನೆ ವಿವರ: ದೊಡ್ಡಹೀರಪ್ಪ ಪ್ರತಿ ವರ್ಷ ಕುರಿ ಮಂದಿಗಳನ್ನು ತನ್ನ ಗ್ರಾಮದಿಂದ ತುಮಕೂರು, ಮಂಡ್ಯ, ಸೇರಿದಂತೆ ವಿವಿಧ ಜಿಲ್ಲೆಯ ತಾಲೂಕು ಹಾಗೂ ಗ್ರಾಮಗಳಿಗೆ ಕರೆದ್ಯೋದು ಅಲ್ಲಿನ ರೈತ ಜಮೀನಿನಲ್ಲಿ ಬಿಟ್ಟು, ಜಮೀನಿನ ಮಾಲಿಕರಿಂದ ದವಸ ಧಾನ್ಯ, ಹಾಗೂ ಹಣವನ್ನು ಪಡೆಯುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ: ಅಂಗಡಿ, ಬೇಕರಿ, ಬಸ್ ತಂಗುದಾಣಕ್ಕೆ ಢಿಕ್ಕಿಯಾಗಿ ಹೋಟೆಲ್ ನುಗ್ಗಿದ ಟೋಯಿಂಗ್ ಲಾರಿ
ಅದರಂತೆ ಕೆಲ ತಿಂಗಳ ಹಿಂದೆ ದೊಡ್ಡ ಹೀರಪ್ಪ ತನ್ನ ಹತ್ತು ಮಂದಿ ಸಹಚರರೊಂದಿಗೆ ನೂರಾರು ಕುರಿಗಳನ್ನು ಮದ್ದೂರಿನ ರೈತ ಜಮೀನಿನಲ್ಲಿ ಬೀಡು ಬಿಟ್ಟು, ಬಳಿಕ ತಮ್ಮ ಗ್ರಾಮಕ್ಕೆ ಗುರುವಾರ ಕುರಿಗಳನ್ನು ಕರೆದುಕೊಂಡು ಬರುತ್ತಿರಬೇಕಾದರೆ, ಲಾರಿ ಕುರಿ ಮಂದೆ ಮೇಲೆ ಹರಿದು 60 ಕುರಿಗಳು ಮೃತಪಟ್ಟು 20 ಕುರಿಗಳು ಗಾಯಗೊಂಡಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಈ ಸಂಬಂಧ ಕುಣಿಗಲ್ ಪೋಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.