Advertisement

Kunigal: ಅಪ್ರಾಪ್ತೆಯ ಅಪಹರಣ, ಲೈಂಗಿಕ ದೌರ್ಜನ್ಯ; ಗುಜರಾತ್ ನಲ್ಲಿ ಬಂಧನ

08:36 PM Oct 20, 2024 | Team Udayavani |

ಕುಣಿಗಲ್: ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿ ಲೈಗಿಂಕ ದೌರ್ಜನ್ಯ ಎಸಗಿದ ಬಿಹಾರ ಮೂಲದ ಯುವಕನೋರ್ವನನ್ನು ಪೋಕ್ಸೋ ಕಾಯ್ದೆ ಅಡಿಯಲ್ಲಿ ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.

Advertisement

ಬಿಹಾರ ಮೂಲದ ಅನುಕುಮಾರ್ ಅಲಿಯಾಸ್ ಶರವಣ ಕುಮಾರ್ (24) ಬಂಧಿತ ಆರೋಪಿ. ಪಟ್ಟಣದ ಅನಿಲ್‌ ಕುಮಾರ್ ಹತ್ತಿರ ಅನುಕುಮಾರ್ ಕೆಲ ದಿನಗಳಿಂದ ಕಟ್ಟಡ ನಿರ್ಮಾಣ ಕೆಲಸ ಮಾಡಿಕೊಂಡು ಶೆಡ್‌ ನಲ್ಲಿ ವಾಸವಾಗಿದ್ದ. ಮತ್ತೊಂದು ಶೆಡ್‌ ನಲ್ಲಿ ವಿಜಯಪುರ, ಯಾದಗಿರಿ ಜಿಲ್ಲೆಗಳ ಕೆಲವರು ಕೆಲಸ ಮಾಡುತ್ತಿದ್ದರು. ಅವರೊಂದಿಗೆ ಅಪ್ರಾಪ್ತೆ ವಾಸವಾಗಿದ್ದು ಅವರ ತಂದೆ, ತಾಯಿ ಯಾರು ಇಲ್ಲದ ವೇಳೆ ಅನುಕುಮಾರ್ ಅಲಿಯಾಸ್ ಶರವಣ್ ಕುಮಾರ್ ಅಪ್ರಾಪ್ತೆಯ ಅಪಹರಿಸಿ ಗುಜರಾತ್ ಇಟ್ಟಿದ್ದನು.

ಬಾಲಕಿಯ ತಾಯಿ ದೂರು ನೀಡಿದ ಹಿನ್ನೆಲೆಯಲ್ಲಿ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಡಿವೈಎಸ್ಪಿ ಓಂ ಪ್ರಕಾಶ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ನವೀನ್‌ ಗೌಡ ಮತ್ತು ಪೇದೆಗಳಾದ ನಟರಾಜ್, ಕಾವ್ಯಾ ಗುಜರಾತ್ ಗೆ ತೆರಳಿ ಆರೋಪಿಯ ಬಂಧಿಸಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next