Advertisement

ಆಸ್ಪತ್ರೆಗಳಲ್ಲಿ ನಾರ್ಮಲ್ ಹೆರಿಗೆಗಿಂತ ಸಿಸೇರಿಯನ್ ಹೆರಿಗೆ ಹೆಚ್ಚಳ : ಅಡಳಿತಾಧಿಕಾರಿ ಕಳವಳ

03:05 PM May 24, 2022 | Team Udayavani |

ಕುಣಿಗಲ್ : ನಾರ್ಮಲ್ ಹೆರಿಗೆಗಿಂತ, ಸಿಸೇರಿಯನ್ ಹೆರಿಗೆ ಹೆಚ್ಚಾಗುತ್ತಿದೆ, ರಾಜ್ಯದಲ್ಲಿ ತುಮಕೂರು ಜಿಲ್ಲೆಯ ಪ್ರಥಮ ಸ್ಥಾನದಲ್ಲಿ ಇರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ತಾ.ಪಂ ಆಡಳಿತಾಧಿಕಾರಿ ಅತೀಕ್‌ಪಾಷ ತಾಲೂಕಿನಲ್ಲಿ ಇದರ ಕಡಿವಾಣಕ್ಕೆ ಕ್ರಮ ಕೈಗೊಳ್ಳುವಂತೆ ತಾಲೂಕು ವೈದ್ಯಾಧಿಕಾರಿ ಡಾ.ಜಗದೀಶ್ ಅವರಿಗೆ ಸೂಚಿಸಿದ ಪ್ರಸಂಗ ತಾ.ಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.

Advertisement

ಮಂಗಳವಾರ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ಸಾಮಾನ್ಯ ಹೆರಿಗೆಯಾಗುತ್ತಿದ್ದರು, ಕೆಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಹೆರಿಗೆ ಆಗುತ್ತಿಲ್ಲ ಶಸ್ತ್ರಚಿಕಿತ್ಸೆ ಹೆಚ್ಚಾಗಿ ಮಾಡುತ್ತಿರುವುದರ ವಿರುದ್ಧ ವ್ಯಾಪಕವಾಗಿ ದೂರು ಕೇಳಿಬರುತ್ತಿದೆ ಇದರ ಬಗ್ಗೆ ಏನು ಕ್ರಮಕೈಗೊಂಡಿದ್ದೀರ ಎಂದು ಟಿಹೆಚ್‌ಓ ಜಗದೀಶ್ ಅವರನ್ನು ಪ್ರಶ್ನಿಸಿದರು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆ ಕರೆದು ಚರ್ಚಿಸಿ ಇದಕ್ಕೆ ಕಡಿವಾಣ ಹಾಕುವಂತೆ ಹಾಗೂ ತಾಯಿ ಮಗು ಮರಣವಾಗದಂತೆ ಎಚ್ಚರಿಕೆಯಿಂದ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಬೇಕೆಂದು ಟಿಹೆಚ್‌ಓಗೆ ತಾಕೀತು ಪಡಿಸಿದರು.

ಲಸಿಕೆಗೆ ಖಾಸಗಿ ಶಾಲೆ ನಿರುತ್ಸಾಹ : ಕೊರೊನಾ ವೈರೆಸ್‌ನಿಂದ ಮಕ್ಕಳನ್ನು ರಕ್ಷಿಸಲು ಸರ್ಕಾರ 12 ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ಕಾರ್ಯಕ್ರಮವನ್ನು ಜಾರಿಗೆ ತಂದಿದೆ, ಇದಕ್ಕೆ ಖಾಸಗಿ ಶಾಲೆಯ ಆಡಳಿತ ಮಂಡಳಿ ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದು ಟಿಹೆಚ್‌ಓ ಡಾ.ಜಗದೀಶ್ ಸಭೆಯಲ್ಲಿ ಗಮನಕ್ಕೆ ತಂದರು, ಇತ್ತೀಚಿಗೆ ಹೊಸ ಹೋಸ ವೈರೆಸ್‌ಗಳು ಸೃಷ್ಠಿಯಾಗುತ್ತಿದೆ, ಮಕ್ಕಳನ್ನು ರಕ್ಷಿಸುವುದು ಅತ್ಯಗತ್ಯವಾಗಿದೆ ಈ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡಲೇ ಖಾಸಗಿ ಶಾಲೆಯ ಆಡಳಿತ ಮಂಡಳಿಯೊಂದಿಗೆ ಮಾತನಾಡಿ ಶೇ 100ರಷ್ಟು ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅತೀಕ್‌ಪಾಷ ತಿಳಿಸಿದರು.

ಇದನ್ನೂ ಓದಿ : ಜ್ಞಾನವಾಪಿ ಮಸೀದಿ ವಿವಾದ: ಮೊದಲಿಗೆ ಮುಸ್ಲಿಂ ಪರ ಅರ್ಜಿ ವಿಚಾರಣೆ

ಆಸ್ಪತ್ರೆಗಳ ದುರಸ್ಥಿಗೆ ಸೂಚನೆ : ನರೇಗಾ ಯೋಜನಡಿಯಲ್ಲಿ ಹಣ ಬಳಸಿಕೊಂಡು ಸರ್ಕಾರಿ ಆಸ್ಪತ್ರೆಗಳ ದುರಸ್ಥಿ ಹಾಗೂ ಗೋಡೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಸೂಚಿಸಿದ ಅತೀಕ್‌ಪಾಷ ಅಗತ್ಯ ವೈದ್ಯಕೀಯ ಪರಿಕರ ಬೇಕಾದಲ್ಲಿ ಪಟ್ಟಿ ಸಲ್ಲಿಸಿದರೆ, ಅನುದಾನ ನೀಡುವುದಾಗಿ ಹೇಳಿದರು.

Advertisement

ಶಿಸ್ತು ಕ್ರಮಕ್ಕೆ ಶಿಪಾರಸ್ಸು : ತಾಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಶಾಲಾ ಕಟ್ಟಡಗಳ ಪರಿಸ್ಥಿತಿ ಹಾಗೂ 12 ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ಹಾಕುವ ಸಂಬಂಧ ಮಾಹಿತಿ ನೀಡಬೇಕಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮಳೆಯಿಂದ ಆಗಿರುವ ಹಾನಿ ಸಂಬಂಧ ವರದಿ ನೀಡಬೇಕಾಗಿರುವ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುರೇಶ್ ಸಭೆಗೆ ಭಾರದಿರುವುದರ ಬಗ್ಗೆ ಕೆಂಡಾಮಂಡಲರಾದ ಆಡಳಿತಾಧಿಕಾರಿ ಅತೀಕ್‌ಪಾಷ ಬಿಇಓ ತಿಮ್ಮರಾಜು, ಪಿಆರ್‌ಇಡಿ ಇಲಾಖೆ ಎಇಇ ಸುರೇಶ್ ಅವರ ವಿರುದ್ದ ಶಿಸ್ತುಕ್ರಮಕ್ಕೆ ಶಿಪಾರಸ್ಸ್ ಮಾಡುವಂತೆ ತಾ.ಪಂ ಇಓ ಜೋಸೆಫ್‌ಗೆ ಸೂಚಿಸಿದರು,

ಸಿಡಿಪಿಓ, ಟಿಹೆಚ್‌ಓಗೆ ತರಾಟೆ : ಸಭೆ ಬೆಳಗ್ಗೆ 11 ಗಂಟೆ ನಿಗಧಿ ಪಡಿಸಿದರು, ಸಮಯ 11-30 ಆದರೂ ಸಭೆಗೆ ಆಗಮಿಸದ ಸಿಡಿಪಿಓ ಅನುಷಾ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ.ಜಗದೀಶ್ ಅವರನ್ನು ಅಡಳಿತಾಧಿಕಾರಿ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು, ಸಭೆಯನ್ನು ಕಾಟಾಚಾರಕ್ಕೆ ಮಾಡುತ್ತಿಲ್ಲ, ತಾಲೂಕಿನ ಉನ್ನತ ಅಧಿಕಾರಿಗಳಾಗಿ ನೀವೆ ಸಭೆಗೆ ತಡವಾಗಿ ಬಂದರೇ ಸಭೆ ಘನತೆ ಗೌರವವನ್ನು ಕಾಪಾಡುವವರು ಯಾರು ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು, ನಿಮ್ಮ ಸಬೂಬು ಬೇಕಿಲ್ಲ ಸರ್ಕಾರಿ ಕೆಲಸವನ್ನು ಸರಿಯಾಗಿ ಮಾಡಬೇಕು ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂಧಿಸಿ ಕೆಲಸ ಮಾಡಬೇಕು ಎಂದರು, ಗೃಹ ಪ್ರವೇಶಕ್ಕೆ ಕಚೇರಿ ಸಿಬ್ಬಂದಿಗಳನ್ನು ಕರೆದುಕೊಂಡು ಹೊದರೇ ಕಚೇರಿಯಲ್ಲಿ ಕೆಲಸ ಮಾಡುವವರು ಯಾರು ಎಂದು ಸಿಡಿಪಿಓ ಅನುಷಾ ಅವರನ್ನು ಪ್ರಶ್ನಿಸಿದರು, ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ನರೇಗಾ ಸಹಾಯಕ ನಿರ್ದೇಶಕ ಸುರೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯ, ತೋಟಗಾರಿಕೆ ಇಲಾಖೆಯ ಸಹಾಯ ನಿರ್ದೇಶಕ ನಾಗರಾಜು, ಬಿಸಿಎಂ ಇಲಾಖೆಯ ವಿಸ್ತಿರಣಾಧಿಕಾರಿ ಪಾರ್ವತವ್ವ, ಆಸ್ಪತ್ರೆ ಆಡಳಿತಾಧಿಕಾರಿ ಗಣೇಶ್‌ಬಾಬು ಮತ್ತಿತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next