Advertisement

ಕುಣಿಗಲ್ : ಧಾರಾಕಾರ ಮಳೆಗೆ ಮನೆ ಗೋಡೆ, ಕಾಲೇಜು ಕಾಂಪೌಂಡ್, ಸೇತುವೆ ಕುಸಿತ    

09:17 AM Aug 02, 2022 | Team Udayavani |

ಕುಣಿಗಲ್ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ್ದಾಗಿ ಮನೆಯ ಗೋಡೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಂಪೌಂಡ್ ಹಾಗೂ ಸೇತುವೆ   ಕುಸಿತಗೊಂಡಿದ್ದು, ತಗ್ಗು ಪ್ರದೇಶದ ಬಡಾವಣೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ಥವ್ಯಸ್ಥಗೊಂಡಿದೆ.

Advertisement

ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ್ದಾಗಿ ಪಟ್ಟಣದ ಬೈರಾಗಿ ಮಠ ಬೀದಿಯ ರೇವಣ್ಣ ಅವರಿಗೆ ಸೇರಿದ ಮನೆಯ ಗೋಡೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಂಪೋಡ್, ಸೇತುವೆ ಸಂಪೂರ್ಣವಾಗಿ ಕುಸಿದಿದ್ದು, ರಸ್ತೆ ಹಾಳಾಗಿದೆ, ಇದರಿಂದ ಕಾಲೇಜಿಗೆ ವಿದ್ಯಾರ್ಥಿಗಳು ಹೊಗಲು ತೊಂದರೆ ಉಂಟಾಗಿದೆ,  ಕಾಲೇಜು ಮುಂಭಾಗದ ಚರಂಡಿಯಲ್ಲಿ ಮಳೆಯ ನೀರು ಬೊರ್ಗರೆಯುತ್ತಿದೆ, ರಸ್ತೆಯಲ್ಲಿ ಎರಡು ಅಡಿಗೂ ಹೆಚ್ಚು ನೀರು ಹರಿದು ವಾಹನಗಳ ಸಂಚಾರಕ್ಕೆ ನಾಗರೀಕರು ತಿರುಗಾಡಲು ತೊಂದರೆ ಉಂಟಾಗಿತ್ತು, ಪಟ್ಟಣದ ಮಿಷನ್ ಕಾಂಪೋಡ್, ಹೌಸಿಂಗ್ ಬೋರ್ಡ್ ಕಾಲೋನಿ ಮೊದಲಾದ ತಗ್ಗು ಪ್ರದೇಶ ಬಡಾವಣೆಯ ಮನೆಗಳಿಗೆ ನೀರು ನುಗ್ಗಿ ಇಡೀ ರಾತ್ರಿ ಜನರು ನೀರು ಹೊರ ಹಾಕುವ ಕೆಲಸದಲ್ಲಿ ತೊಡಗಿದರು.

ಇದನ್ನೂ ಓದಿ  : ಸುಬ್ರಹ್ಮಣ್ಯ ಗುಡ್ಡ ಕುಸಿದು ಮಕ್ಕಳು ಮೃತಪಟ್ಟ ಪ್ರಕರಣ: ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

22 ವರ್ಷದ ಬಳಿಕ ಚಿಕ್ಕಕೆರೆ ಕೆರೆ ಕೋಡಿ : ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಚಿಕ್ಕಕೆರೆ 22 ವರ್ಷದ ಬಳಿಕ ಸಂಪೂರ್ಣವಾಗಿ ತುಂಬಿ ಭರ್ತಿಯಾಗಿ ಕೋಡಿ ಬಿದ್ದಿರುವುದು ಈ ಭಾಗದ ನಾಗರೀಕರ ಹಾಗೂ ರೈತರ ಸಂತಸಕ್ಕೆ ಕಾರಣವಾಗಿದೆ, ಮೂಡಲ್ ಕುಣಿಗಲ್ ಕೆರೆ ನೋಡೋಕೆ ಒಂದು ವೈಭೋಗ ಮೂಡಿ ಬರುತ್ತಾನೆ ಚಂದಿರಾಮ ಎಂಬ ಜಾನಪದ ಗೀತೆ ಒಳಗೊಂಡಿರುವ ಐತಿಹಾಸಿಕ ಹೆಸರಾಂತ ಕುಣಿಗಲ್ ದೊಡ್ಡಕೆರೆ ಕೋಡಿ ಬಿದ್ದಿದೆ,

ಮಾರ್ಕೋನಹಳ್ಳಿ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ಸ್ ಒಳ ಹರಿವು : ದಿನೇ, ದಿನೇ ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ತುರುವೇಕೆರೆ ಸೇರಿದಂತೆ ಮೊದಲಾದ ಕೆರೆಗಳು ತುಂಬಿ ಕೋಡಿ ಬಿದ್ದಿರುವ ಕಾರಣ ಮಾರ್ಕೋನಹಳ್ಳಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ,    ಸೋಮವಾರ ಜಲಾಶಯಕ್ಕೆ ೬೫೦೦ ಕ್ಯೂಸೆಕ್ಸ್ ನೀರು ಹರಿದು ಬರುತ್ತಿತು, ಆದರೆ ಮಂಗಳವಾರ 20 ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ, ಈ ಪ್ರಮಾಣದ ನೀರನ್ನು  ಶಿಂಷಾ ನದಿಗೆ ಹದಿರು ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next