Advertisement
ಘಟನೆಯಲ್ಲಿ ಕೋಟೆ ವಾಸಿಗಳಾದ ಮಂಜಮ್ಮ (42), ಶಿವಣ್ಣ (45), ಸಮೀನಾ(46), ಕುಶಾಲ್ (11), ಹೇಮಲತಾ(16) ತೀವ್ರವಾಗಿ ಗಾಯಗೊಂಡಿದ್ದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ, ಶೃತಿ (45) ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.
ರವಿಕುಮಾರ್ ಖಾರಪುರಿ ವ್ಯಾಪಾರಿಯಾಗಿದ್ದು, ಪುರಿಯನ್ನು ಹುರಿಯಲು ಹಾಗೂ ಅದುಗೆ ಮಾಡಲು ನಾಲ್ಕು ಕೆ.ಜಿ ಗ್ಯಾಸ್ ಸಿಲಿಂಡರ್ ಸ್ಟವ್ ಬಳಸುತ್ತಿದ್ದರು, ರವಿಕುಮಾರ್ ಹೆಂಡತಿ ಶೃತಿ ಆಕೆಯ ಮಗಳು ಹೇಮಳನ್ನು ಟ್ಯೂಷನ್ ಗೆ ಬಿಡಲು ಮನೆಯಿಂದ ಹೊರ ಬರುತ್ತಿದಂತೆ ಮನೆಯಲ್ಲಿ ಸ್ಪೋಟದ ಶಬ್ದ ಕೇಳಿ ಬಂದಿದೆ. ಮನೆ ಒಳಗೆ ಹೋಗಿ ನೋಡಿದಾಗ ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು. ಆ ವೇಳೆ ಮನೆಯಲ್ಲಿ ಇದ್ದ ಕುಶಾಲ್ ಹಾಗೂ ಶೃತಿ, ಹೇಮಲತಾಗೆ ಗಾಯವಾಗಿದೆ. ನೋಡಲು ಬಂದವರಿಗೂ ಗಾಯ
ಸಿಲಿಂಡರ್ ಸ್ಪೋಟದ ಶಬ್ದವನ್ನು ಕೇಳಿ ನೋಡಲು ಬಂದ ಅಕ್ಕ ಪಕ್ಕದ ಮನೆಯವರಾದ ಶಿವಣ್ಣ, ಮಂಜಮ್ಮ, ಹಾಗೂ ಸಮೀನಾ ಅವರಿಗೂ ತೀವ್ರವಾಗಿ ಗಾಯಗೊಂಡಿದ್ದಾರೆ.
Related Articles
ಸಿಲಿಂಡರ್ ಸ್ಪೋಟದಿಂದ ಬೆಂಕಿ ಅವರಿಸಿಕೊಂಡು ಮನೆಯಲ್ಲಿ ಇದ್ದ ದವಸ ಧಾನ್ಯ, ಯುಪಿಎಸ್, ಗೃಹ ಬಳಕೆ ವಸ್ತುಗಳು ಹೊತ್ತಿ ಉರಿದಿವೆ. ಸ್ಪೋಟದ ಶಬ್ದಕ್ಕೆ ಮನೆಯ ಬಾಗಿಲು ಮುರಿದು ಅಪಾರ ನಷ್ಟ ಉಂಟಾಗಿದೆ. ಘಟನೆಯಲ್ಲಿ ರವಿಕುಮಾರ್ ಹಾಗೂ ನಟರಾಜ ಅವರ ಮನೆಗೆ ಹಾನಿಯಾಗಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬಂದಿಗಳು ತೆರಳಿ ಬೆಂಕಿಯನ್ನು ನಂದಿಸಿದ್ದಾರೆ, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Advertisement