ಕುಣಿಗಲ್: ಆಕಸ್ಮಿಕ ಬೆಂಕಿ ತಗುಲಿ ಒಮಿನಿ, ಕಾರು ಮತ್ತು ಆಟೋ ರಿಕ್ಷಾ ಸಂಪೂರ್ಣ ಭಸ್ಮವಾಗಿರುವ ಘಟನೆ ಜ.11ರ ರಾತ್ರಿ ಪಟ್ಟಣದಲ್ಲಿ ನಡೆದಿದೆ.
Advertisement
ಪಟ್ಟಣದ ತಿರುಮಲ ಕಲ್ಯಾಣ ಮಂಟಪದ ಸಮೀಪದ ಮನೆಯ ಮುಂಭಾಗ ನಿಲ್ಲಿಸಿದ ಅಸ್ಲಂ ಅವರಿಗೆ ಸೇರಿದ ಆಟೋ ಹಾಗೂ ರಫೀಕ್ ಅವರಿಗೆ ಸೇರಿದ ಕಾರಿನಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಮತ್ತು ಆಟೋ ಸಂಪೂರ್ಣ ಬೆಂಕಿಗಾಹುತಿಯಾಗಿವೆ.
ಅಗ್ನಿಶಾಮಕ ದಳ ಘಟನೆ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದೆ.