Advertisement

ರಾಗಿ ಖರೀದಿ ಟೋಕನ್ ನೀಡುವಲ್ಲಿ ತಾರತಮ್ಯ : ಆಕ್ರೋಶಿತ ರೈತರಿಂದ ಹೆದ್ದಾರಿ ತಡೆ

09:24 PM May 23, 2022 | Team Udayavani |

ಕುಣಿಗಲ್ : ರಾಗಿ ಖರೀದಿಯ ಟೋಕನ್ ಕೊಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ಹಳೇಯ ರಾಷ್ಟ್ರೀಯ ಹೆದ್ದಾರಿ 48 ರ ಎಪಿಎಂಸಿ ಮುಂಭಾದ ರಸ್ತೆಗೆ ಟ್ರ‍್ಯಾಕ್ಟರ್ ಅಡ್ಡಲಾಗಿ ನಿಲ್ಲಿಸಿ, ರೋಡಿಗೆ ಕಲ್ಲು ಇಟ್ಟು ಪ್ರತಿಭಟನೆ ನಡೆಸಿದರು.

Advertisement

ದಳ್ಳಾಳಿಗಳ, ಹಾಗೂ ರಾಜಕೀಯ ಹಿಂಬಾಲಕರಿಗೆ ಟೋಕನ್ ನೀಡಿ ರಾಗಿ ಖರೀದಿಸಲಾಗುತ್ತಿದೆ, ಆದರೆ ನಿಜವಾದ ರೈತರಿಂದ ರಾಗಿ ಖರೀದಿಸದೇ ತಾಲೂಕು ಆಡಳಿತ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ನೂರಾರು ರೈತರು ಹಳೇಯ ರಾಷ್ಟ್ರೀಯ ಹೆದ್ದಾರಿ 48 ಬೆಂಗಳೂರು, ಮಂಗಳೂರು ರಸ್ತೆಗೆ ಕಲ್ಲಿಟ್ಟು ಪ್ರತಿಭಟನೆ ನಡೆಸಿದರು ಇದರಿಂದ ಕೆಲ ಸಮಯ ವಾಹನ ಸಂಚಾರಕ್ಕೆ ಹಾಗೂ ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು,

ಆಕ್ರೋಶಿತ ರೈತರು ಮಾತನಾಡಿ ಬಡ್ಡಿಗೆ ಹಣ ತಂದು, ಕಷ್ಟು ಪಟ್ಟು ವ್ಯವಸಾಯ ಮಾಡಿ ರಾಗಿ ಬೆಳೆದು ಮಾರಾಟಕ್ಕೆ ತಂದರೆ ಇಲ್ಲಿನ ರಾಗಿ ಖರೀದಿ ಕೇಂದ್ರದ ಅಧಿಕಾರಿಗಳು ನಮ್ಮಿಂದ ರಾಗಿ ಖರೀದಿಸದೇ ದಳ್ಳಾಳಿಗಳು ಹಾಗೂ ರಾಜಕಾರಣಿಗಳ ಹಿಂಬಾಲಕರಿಂದ ರಾಗಿ ಖರೀದಿಸುತ್ತಿದ್ದಾರೆ, ಹೀಗಾಗಲೇ ಹಲವು ದಿನಗಳಿಂದ ತಾಲೂಕಿನಾಧ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ, ಧನ ಕರಗಳು ಊರಿನಲ್ಲಿ ಬಿಟ್ಟು ಅನ್ನ ನೀರಿಲ್ಲದೆ ಎಪಿಎಂಸಿ ಬಳಿ ರಾಗಿ ತಂದು ಹಾಕಿಕೊಂಡಿದ್ದೇವೆ ಮಳೆಯಲ್ಲಿ ರಾಗಿ ನೆಂದರೇ ಯಾರು ರಾಗಿ ಕೊಳ್ಳುತ್ತಾರೆ, ಮೇ ೩೧ ರಾಗಿ ಖರೀದಿಗೆ ಕೊನೆಯ ದಿನಾಂಕ ಎಂದು ಹೇಳಲಾಗುತ್ತಿದೆ ಹೀಗಾದರೆ ನಮ್ಮ ಪಾಡು ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು, ತಕ್ಷಣ ಬೆಂಬಲ ಬೆಲೆಗೆ ರಾಗಿಯನ್ನು ಖರೀದಿಸಬೇಕು ಇಲ್ಲವಾದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುವುದ್ದಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ : ಬುದ್ಧನ ಮಾರ್ಗ ಅನುಸರಿಸುವ ಅವಶ್ಯಕತೆಯಿದೆ : ಜಪಾನ್ ನಲ್ಲಿ ಪ್ರಧಾನಿ ಮೋದಿ

ಅಧಿಕಾರಿಗೆ ತರಾಟೆ : ಪ್ರತಿಭಟನಾ ಸ್ಥಳಕ್ಕೆ ತೆರಳಿದ ರಾಜ್ಯ ಒಕ್ಕಲಿಂಗ ಸಂಘದ ನಿರ್ದೇಶಕ ಬಿ.ಎನ್.ಲೋಕೇಶ್ ರೈತರ ಸಮಸ್ಯೆಯನ್ನು ಹೇಳಿದರು, ಅತಿವೃಷ್ಠಿ ಅನಾವೃಷ್ಠಿ ನಸುವೆಯೂ ರೈತರು ರಾಗಿ ಬೆಳೆದು, ಬೆಂಬಲ ಬೆಲೆಗೆ ಮಾರಾಟ ಮಾಡಲು ರಾಗಿ ಖರೀದಿ ಕೇಂದ್ರಕ್ಕೆ ತಂದರೆ ಅವರಿಂದ ಖರೀದಿಸಲು ಇಲ್ಲದ ಸಬೂಬು ಹೇಳುತ್ತಿರುವುದು ಸರಿಯಲ್ಲ ಎಂದು ರಾಗಿ ಖರೀದಿ ಕೇಂದ್ರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು, ನೊಂದಾಯಿಸಿದ ರೈತರಿಂದ ಮೊದಲು ರಾಗಿ ಖರೀದಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಪಡಿಸಿದರು,

Advertisement

ತಾರತಮ್ಯ ನಡೆದಿಲ್ಲ ಸ್ಪಷ್ಟನೇ : ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ತಹಶೀಲ್ದಾರ್ ಮಹಬಲೇಶ್ವರ ರಾಗಿ ಖರೀದಿಗೆ ಐದು ಸಾವಿರ ರೈತರು ತಮ್ಮ ಹೆಸರನ್ನು ನೊಂದಣಿ ಮಾಡಿಕೊಂಡಿದ್ದಾರೆ, ಈ ಪೈಕಿ ಎರಡು ಸಾವಿರ ರೈತರಿಗೆ ಟೋಕನ್ ನೀಡಲಾಗಿದೆ, ಉಳಿದ ರೈತರಿಗೆ ಶೀಘ್ರದಲ್ಲೇ ಟೋಕನ್ ನೀಡಲಾಗುವುದು, ಆತಂಕ ಬ್ಯಾಂಡ ರಾಗಿ ಖರೀದಿಗೆ ಮೇ 31 ಕೊನೆಯ ದಿನಾಂಕ ನಿಗಧಿ ಪಡಿಸಲಾಗಿದೆ. ಆದರೆ ರಾಗಿ ಖರೀದಿ ಅವಧಿಯನ್ನು ವಿಸ್ತರಿಸುವಂತೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ, ಸರ್ಕಾರ ಇದರ ಬಗ್ಗೆ ಕ್ರಮಕೈಗೊಳ್ಳಲಿದೆ ಎಂಬ ಭರವಸೆ ನಮಗೆ ಇದೆ ರಾಗಿ ಖರೀದಿ ಟೋಕನ್ ನೀಡುವಲ್ಲಿ ತಾರತಮ್ಯ ಮಾಡಿಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು, ತಹಶೀಲ್ದಾರ್ ನೀಡಿದ ಭರವಸೆಯಿಂದ ರೈತರು ಪ್ರತಿಭಟನೆ ಕೈ ಬಿಟ್ಟರು,
ಯಾವುದೇ ಅನಾಹುತವಾಗದಂತೆ ಸಿಪಿಐ ಗುರುಪ್ರಸಾದ್ ಮುನ್ನೆಚ್ಚರಿಕೆ ಕ್ರಮಕೈಗೊಂಡು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದರು,

Advertisement

Udayavani is now on Telegram. Click here to join our channel and stay updated with the latest news.

Next