ಕುಣಿಗಲ್ : ರಸ್ತೆ ಅಪಘಾತದಲ್ಲಿ ಮೃತಪಟ್ಟ ತಂದೆಯ ಕಣ್ಣನ್ನು ಮಗ ದಾನ ಮಾಡುವ ಮೂಲಕ, ನೋವಿನಲ್ಲೂ ಮಾನವೀಯತೆ ಮೆರೆದ ಅಪರೂಪದ ಪ್ರಸಂಗ ತಾಲೂಕಿನ ಅಮೃತೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.
ತಾಲೂಕಿನ ಅಮೃತೂರು ಗ್ರಾಮದ ಗೋವಿಂದರಾಜು ಮೃತ ತನ್ನ ತಂದೆ ಹುಚ್ಚಯ್ಯ (60) ಅವರ ಕಣ್ಣುಗಳನ್ನು ದಾನ ಮಾಡಿ ಮಾನವೀಯತೆ ಮೆರೆದು ಇತರರಿಗೆ ಮಾರಿಯಾಗಿದ್ದಾರೆ.
ಹುಚ್ಚಯ್ಯ ರೈತನಾಗಿದ್ದು, ಸೋಮವಾರ ಬೆಳಗ್ಗೆ ಎಂದಿನಂತೆ ಡೈರಿಗೆ ಹೋಗಿ ಹಾಲು ಖರೀದಿಸಿ ನಡೆದುಕೊಂಡು ಮನೆಗೆ ವಾಪಸ್ ಬರುತ್ತಿರ ಬೇಕಾದರೆ, ಹಾಲಿನ ವ್ಯಾನ್ ಚಾಲಕ ಕುಣಿಗಲ್ ಹಾಗೂ ಇತರೆ ಡೈರಿಗಳಿಂದ ಹಾಲು ಶೇಖರಣೆ ಮಾಡಿಕೊಂಡು ಬಳಿಕ ಅಮೃತೂರು ಡೈರಿಯಲ್ಲಿ ಹಾಲು ಶೇಖರಣೆ ಮಾಡಿಕೊಂಡು ವ್ಯಾನ್ ಅನ್ನು ತಿರುಗಿಸಿಕೊಂಡು ಹೋಗುತ್ತಿರ ಬೇಕಾದರೆ ಹುಚ್ಚಯ್ಯನಿಗೆ ಢಿಕ್ಕಿ ಹೊಡೆದಿದೆ, ಹುಚ್ಚಯ್ಯ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಕಣ್ಣುಗಳ ದಾನ
ತನ್ನ ತಂದೆ ಅಪಘಾತದಲ್ಲಿ ಮೃತಪಟ್ಟ ವಿಚಾರ ತಿಳಿದ ಗೋವಿಂದರಾಜನ್ನು ಘಟನೆ ಸ್ಥಳಕ್ಕೆ ತೆರಳಿ ಶವವನ್ನು ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ತನ್ನ ತಂದೆಯ ಕಣ್ಣುಗಳನ್ನು ದಾನವಾಗಿ ಪಡೆದುಕೊಳ್ಳುವಂತೆ ನೇತ್ರ ತಜ್ಞ ಡಾ.ರೋಷನ್ ಅವರಲ್ಲಿ ಮನವಿ ಮಾಡಿದ್ದಾರೆ, ತತ್ ಕ್ಷಣ ಕಾರ್ಯಪ್ರವೃತರಾದ ಡಾ.ರೋಷನ್ ತನ್ನ ಸಹಪಾಠಿಗಳೊಂದಿಗೆ ಕಣ್ಣುಗಳನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದಾರೆ, ಬಳಿಕ ಬೆಂಗಳೂರು ಲಯನ್ಸ್ ಹೈ ಕೇರ್ ಆಸ್ಪತ್ರೆ ಕಳಿಸಿಕೊಟ್ಟಿದ್ದಾರೆ.
ಕಣ್ಣುಗಳು ದಾನ ಮಾಡಿದರೇ ಇನ್ನೋಬ್ಬರಿಗೆ ಉಪಯೋಗವಾಗುತ್ತದೆ, ಬೆಂಕಿಯಲ್ಲಿ ಸುಟ್ಟರೆ ಯಾರಿಗೂ ಪ್ರಯೋಜನವಾಗುವುದಿಲ್ಲ ಹಾಗಾಗಿ ಕಣ್ಣುಗಳನ್ನು ದಾನ ಮಾಡುವಂತೆ ನನ್ನ ಹೆಂಡತಿಯ ತಮ್ಮ ಸಂತೋಷ್ ತಿಳಿಸಿದರು, ಇದಕ್ಕೆ ನಮ್ಮ ಮನೆಯವರೆಲ್ಲರೂ ಒಪ್ಪಿಗೆ ನೀಡಿದ ಕಾರಣ ತನ್ನ ತಂದೆ ಕಣ್ಣುಗಳನ್ನು ದಾನ ಮಾಡಲಾಗಿದೆ ಎಂದು ಗೋವಿಂದರಾಜು ಹೇಳಿದ್ದಾರೆ.