Advertisement

ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ನಾಲ್ವರ ಮೃತದೇಹ ಪತ್ತೆ, ಮೂರು ದಿನದ ಕಾರ್ಯಚರಣೆ ಮುಕ್ತಾಯ

08:35 PM Nov 30, 2021 | Team Udayavani |

ಕುಣಿಗಲ್ : ಭಾನುವಾರ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದಲ್ಲಿ ಸಂಭವಿಸಿದ ದುರಂತದಲ್ಲಿ ಕೊಚ್ಚಿಕೊಂಡು ಹೋಗಿದ್ದ ನಾಲ್ವರ ಮೃತದೇಹ ಪತ್ತೆಯಾಗಿದ್ದು, ಮೂರು ದಿನಗಳ ಕಾರ್ಯಚರಣೆ ಮುಕ್ತಾಯವಾಗಿದೆ,

Advertisement

ಮಾರ್ಕೋನಹಳ್ಳಿ ಜಲಾಶಯದಲ್ಲಿ ಸಂಭವಿಸಿದ ಘೋರ ದುರಂತದಲ್ಲಿ ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದ ಬಾಲಕಿ, ಮಹಿಳೆ ಹಾಗೂ ಎಡಿಯೂರು ಬೀರಗಾನಹಳ್ಳಿ ಗ್ರಾಮದ ಇಬ್ಬರು ಸಹೋದರರು ಜಲಾಶಯದ ಎಡ ಮತ್ತು ಬಲ ಕೋಡಿ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು ಶವಗಳ ಪತ್ತೆಗಾಗಿ ಅಗ್ನಿಶಾಮಕದಳ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸೇರಿದಂತೆ ಐದು ತಂಡಗಳಿಂದ ಮೂರು ದಿನಗಳ ಕಾಲ ಕಾರ್ಯಚರಣೆ ನಡೆಸಿದರು, ಸೋಮವಾರ ಸಾಧೀಕಾ ಭಾನು ಹಾಗೂ ಅಪ್ಪು ಮೃತದೇಹಗಳು ಪತ್ತೆಯಾಗಿದ್ದವು ಉಳಿದ ಇಬ್ಬರ ಶವಗಳ ಪತ್ತೆಗಾಗಿ ಮಂಗಳವಾರ ಕಾರ್ಯಾಚರಣೆ ಮುಂದುವರಿಸಿದರು, ಸದಿಯ ಸುಮಾರು ಆರು ಕಿ.ಮೀ ದೂರದಲ್ಲಿ ಕುಣಿಗಲ್‌ನ ಪರ್ವೀನ್ ತಾಜ್ ಹಾಗೂ ಮೂರು ಕಿ.ಮೀ ದೂರದಲ್ಲಿ ಎಡಿಯೂರಿನ ರಾಜು ಅವರ ಮೃತದೇಹಗಳು ಪತ್ತೆಯಾದವು, ಇದರಿಂದ ಕಳೆದ ಮೂರು ದಿನಗಳಿಂದ ಕಾರ್ಯಚರಣೆ ನಡೆಸಿ ಇಂದು ಮುಕ್ತಾಯಗೊಂಡಿತು, ಶವಗಳನ್ನು ಮರಣೊತ್ತರ ಪರೀಕ್ಷೆ ನಡೆಸಿ ಅವರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಅಭಿನಂದನೆ : ಮಾರ್ಕೋನಹಳ್ಳಿ ಜಲಾಶಯದಲ್ಲಿ ಸಂಭವಿಸಿದ ದುರಂತದಲ್ಲಿ ನೀರಿನಲ್ಲಿ ಕೊಚ್ಚಿಹೊದ ನಾಲ್ವರ ಮೃತದೇಹ ಪತ್ತೆಗಾಗಿ ತುಮಕೂರು, ಕುಣಿಗಲ್, ಮಂಡ್ಯ, ನಾಗಮಂಗಲದ ಅಗ್ನಿಶಾಮಕದಳ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸುರಿಯುವ ಮಳೆ, ಚಳಿಯನ್ನು ಲೆಕ್ಕಿಸದೇ ಮೃತ ದೇಹ ಪತ್ತೆಗಾಗಿ ಮೂರು ದಿನಗಳ ಕಾಲ ಕಾರ್ಯಚರಣೆ ನಡೆಸಿ ಶವಗಳನ್ನು ನೀರಿನಿಂದ ಹೊರ ತೆಗೆದು ವಾರಸುದಾರಿಗೆ ಕೊಟ್ಟ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಶಾಸಕ ಡಾ.ಹೆಚ್.ಡಿ.ರಂಗನಾಥ್ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next