Advertisement

ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಮಾರಾಕಾಸ್ತ್ರದಿಂದ ದಾಳಿ, ಇಬ್ಬರ ಸ್ಥಿತಿ ಗಂಭೀರ

10:40 PM Jun 29, 2022 | Team Udayavani |

ಕುಣಿಗಲ್ : ಹಳೇ ದ್ವೇಶದ ಹಿನ್ನಲೆಯಲ್ಲಿ ಎರಡು ಗುಂಪುಗಳ ನಡುವೆ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದು ಘಟನೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಬೈರನಾಯಕನಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.

Advertisement

ಗ್ರಾಮದ ಬಿ.ಸಿ ರವಿಕುಮಾರ್ (32) ಚನ್ನಕಲ್ಲಯ್ಯ (75) ಹಲ್ಲೆಗೊಳಗಾದ ವ್ಯಕ್ತಿಗಳು.

ಬಿ.ಎಸ್.ಸುರೇಶ್, ಬಿ.ಜಿ.ಕಿರಣ್, ಕಲ್ಲಪಾಳ್ಯ ನಾಗಹೊನ್ನ, ಕುದೂರಿನ ಸುರೇಶ್ ವಿರುದ್ದ ಗಾಯಾಳು ರವಿ ಕುಮಾರ್ ಪತ್ನಿ ಎಸ್.ಚೈತ್ರ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗಂಭೀರ ಗಾಯಗೊಂಡ ರವಿಕುಮಾರ್ ಅವರಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಘಟನೆ ವಿವರ : ಅಪ್ರಾಪ್ತೆಯನ್ನು ಮದುವೆ ಹಾಗೂ ಅಪಹರಣದ ಸಂಬಂಧ ಸುರೇಶ್, ಕಿರಣ್, ಕಲ್ಲಪಾಳ್ಯ ನಾಗಹೊನ್ನ, ವಿರುದ್ದ ಕುಣಿಗಲ್ ಪೊಲೀಸ್ ಠಾಣೆಗೆ ರವಿಕುಮಾರ್ ದೂರು ನೀಡಿದರು, ಈ ಸಂಬಂಧ ಮೂರು ಜನರ ವಿರುದ್ದ ಪ್ರಕರಣ ದಾಖಲಾಗಿತ್ತು, ಅವರು ಜಾಮೀನ ಮೇಲೆ ಜೈಲಿನಿಂದ ಹೊರ ಬಂದು ನಮ್ಮ ವಿರುದ್ದ ದೂರು ನೀಡಿರುವ ಬಿ.ಸಿ.ರವಿಕುಮಾರ್ ಅವರನ್ನು ಒಂದು ಗತಿ ಕಾಣಿಸುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದರು ಈ ವಿಚಾರ ಗ್ರಾಮಸ್ಥರಿಂದ ತಿಳಿದು ನಮ್ಮ ಯಜಮಾನರಿಗೆ ಎಚ್ಚರದಿಂದ ಇರುವಂತೆ ಹೇಳಿದೆ ಎಂದು ದೂರಿನಲ್ಲಿ ಆರೋಪಿಸಿದರು. ರವಿಕುಮಾರ್ ಅವರ ಪತ್ನಿ ಎಸ್.ಚೈತ್ರ ಈ ಹಿನ್ನಲೆಯಲ್ಲಿ ಇಂದು ನನ್ನ ಪತಿ ಹಾಗೂ ಮಾವ ಜಮೀನಿನ ಬಳಿ ಹೊಲದ ಕೆಲಸ ಮಾಡುತ್ತಿದ್ದಾಗ ಬಿ.ಎಸ್.ಸುರೇಶ್, ಬಿ.ಜಿ.ಕಿರಣ್, ಕಲ್ಲುಪಾಳ್ಯ ನಾಗಹೊನ್ನ, ಕುಂದೂರಿನ ಸುರೇಶ್ ಅವರು ಸೇರಿಕೊಂಡು ನನ್ನ ಪತಿ ರವಿಕುಮಾರ್ ಹಾಗೂ ಮಾವ ಚಿಕ್ಕಕಲ್ಲಯ್ಯ ಅವರ ಮೇಲೆ ಮಚ್ಚು, ದೊಣ್ಣೆ ಹಾಗೂ ಲಾಂಗ್‌ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಘಟನೆಯಲ್ಲಿ ನನ್ನ ಯಜಮಾನರ ತಲೆ ಬೆನ್ನು ಕೆನ್ನೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ನಮ್ಮ ಮಾವ ಚಿಕ್ಕಕಲ್ಲಯ್ಯ ಅವರಿಗೂ ಗಾಯಗೊಂಡಿದ್ದಾರೆ.

Advertisement

ಈ ಕುರಿತು ರವಿಕುಮಾರ್ ಅವರ ಪತ್ನಿ ಆರೋಪಿಗಳ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next