Advertisement

ಕ್ಷುಲಕ ಕಾರಣಕ್ಕೆ ಯುವಕರ ನಡುವೆ ವಾಗ್ವಾದ : ಯುವಕ ಹೊಟ್ಟೆಗೆ ಚಾಕು ಇರಿತ

10:07 PM Jun 21, 2022 | Team Udayavani |

ಕುಣಿಗಲ್ : ಕ್ಷುಲಕ ಕಾರಣಕ್ಕೆ ಯುವಕ ನಡುವೆ ವಾಗ್ವಾದ ನಡೆದು, ಯುವಕನ ಹೊಟ್ಟೆಗೆ ಚಾಕುವಿನಿಂದ ಇರಿದ ಘಟನೆ ಪಟ್ಟಣದ ನೇಗೆರರ ಬೀದಿಯಲ್ಲಿ ನಡೆದಿದ್ದು. ಘಟನೆಗೆ ಸಂಬಂಧಿಸಿದಂತೆ ಆರೋಪಿ ಓರ್ವನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಪಟ್ಟಣದ ತಿಗಳರ ಬೀದಿ ವಾಸಿ ಗಜೇಂದ್ರಕುಮಾರ್ ಗಾಯಗೊಂಡ ಯುವಕ.

ಘಟನೆ ವಿವರ : ಗಜೇಂದ್ರಕುಮಾರ್ ಕಳೆದ ರಾತ್ರಿ ತನ್ನ ಸ್ನೇಹಿತನನ್ನು ನೋಡಲೆಂದು ನೆಗೇರರ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರ ಬೇಕಾದರೆ ಬೈಕ್‌ನಲ್ಲಿ ಎದುರಿಗೆ ಬಂದ ಜುನಾಯಿದ್ ಮತ್ತು ಆತನ ಸ್ನೇಹಿತರು ಗಜೇಂದ್ರಕುಮಾರ್‌ನ ಮೇಲೆ ಬೈಕ್ ಬಿಡುವ ರೀತಿಯಲ್ಲಿ ಬಂದಿದ್ದಾರೆ ಎನ್ನಲಾಗಿದ್ದು ಈ ನಡುವೆ ಜುನಾಯಿದ್ ಹಾಗೂ ಗಜೇಂದ್ರಕುಮಾರ್ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದ್ದು ಬಳಿಕ ಮೂರು ಮಂದಿ ಆರೋಪಿಗಳು ಬೈಕ್‌ನಲ್ಲಿ ತೆರಳಿದರು ಗಜೇಂದ್ರಕುಮಾರ್ ಮನೆಗೆ ಬಂದು ಊಟ ಮಾಡಿ ಮನೆಯಿಂದ ಹೊರಗೆ ಬಂದ ವೇಳೆಯಲ್ಲಿ ಮತ್ತೆ ಅಲ್ಲಿಗೆ ಬಂದ ಜುನಾಯಿತ್ ಹಾಗೂ ಆತನ ಇಬ್ಬರು ಸಹಚರರು ಮತ್ತೆ ಗಜೇಂದ್ರಕುಮಾರನೊಂದಿಗೆ ವಾಗ್ವಾದಕ್ಕೆ ಇಳಿದು ಬಳಿಕ ಗಜೇಂದ್ರಕುಮಾರನ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ತೀವ್ರವಾಗಿ ಗಾಯಗೊಂಡ ಗಜೇಂದ್ರಕುಮಾರ್ ನನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆ ನಂತರ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮೆಜಸ್ಟಿಕ್ ಹತ್ತಿರವಿರುವ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ

ಪ್ರಕರಣ ದಾಖಲಿಸಿಕೊಂಡ ಪಟ್ಟಣದ ಪೊಲೀಸರು ಓರ್ವ ಆರೋಪಿಯನ್ನು ಬಂದಿಸಿ, ಉಳಿದ ಇಬ್ಬರು ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next