Advertisement

Kunigal: ಬೈಕ್ ಗೆ ಸರಕು ವಾಹನ ಡಿಕ್ಕಿ; ಸಹ ಸವಾರೆ ಸ್ಥಳದಲ್ಲೇ ಸಾವು

01:54 PM Feb 11, 2024 | Team Udayavani |

ಕುಣಿಗಲ್ : ಸರಕು ವಾಹನ (407) ಬೈಕ್ ಗೆ  ಡಿಕ್ಕಿ‌ ಹೊಡೆದ‌ ಪರಿಣಾಮ ಸಹ ಸವಾರೆ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಹೇರೂರು ಸರ್ವಿಸ್ ರಸ್ತೆಯಲ್ಲಿ ಫೆ.11ರ ಭಾನುವಾರ ಮಧ್ಯಾಹ್ನ ನಡೆದಿದೆ.

Advertisement

ತಾಲೂಕಿನ‌ ಕಸಬಾ ಹೋಬಳಿ ಲಾಳಾಪುರ ಗ್ರಾಮದ ಮಂಜುಳ (45) ಮೃತರು.

ಮಂಜುಳ ಹಾಗೂ ಆಕೆಯ ಮಗ ಕಿರಣ್ ಲಾಳಾಪುರ ಗ್ರಾಮದಿಂದ ಕುಣಿಗಲ್ ಗೆ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭ ಕುಣಿಗಲ್ ಕಡೆಯಿಂದ ಎಡೆಯೂರು ಕಡೆಗೆ  ಹೊಗುತ್ತಿದ್ದ (407) ಸರಕು ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.

ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next