Advertisement

ಕುಣಿಗಲ್: ಪ್ರಸಿದ್ದ ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ಹುಂಡಿ ಕಳವು

07:25 PM Jan 04, 2023 | Team Udayavani |

ಕುಣಿಗಲ್ : ಮುಜರಾಯಿ ಇಲಾಖೆಗೆ ಸೇರಿರುವ ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ಹುಂಡಿ ಹಣ ಹಾಗೂ ಪೊಲೀಸ್ ಚೌಕಿಯ ಗೇಟ್‌ನ ಬೀಗ ಮುರಿದು ವೈರ್ ಲೆಸ್ ರಿಪೀಟರ್ ಅನ್ನು ದುಷ್ಕರ್ಮಿಗಳು ಕಳ್ಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ.

Advertisement

ದುಷ್ಕರ್ಮಿಗಳು ದೇವಾಲಯದ ಹುಂಡಿ ಹೊಡೆದು ಹುಂಡಿಯಲ್ಲಿ ಇದ್ದ ಸುಮಾರು 25 ಸಾವಿರಕ್ಕೂ ಅಧಿಕ ಹಣ ಹಾಗೂ ಪೊಲೀಸ್ ಚೌಕಿಯಲ್ಲಿ ಅಳವಡಿಸಿದ ವೈರ್‌ಲೆಸ್ ರಿಪೀಟರ್ ಅನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ.

ಕುಣಿಗಲ್‌ನಿಂದ ಸುಮಾರು 5 ಕಿ.ಮೀ ದೂರದಲ್ಲಿ ಇರುವ ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯ ಸಮುದ್ರ ಮಟ್ಟದಿಂದ 2987 ಅಡಿ ಎತ್ತರದಲ್ಲಿ ಇದೆ 1450 ಎಕರೆ ಅರಣ್ಯ ಪ್ರದೇಶ ಸುತ್ತುವರೆದಿದೆ, ದೇವಾಲಯಕ್ಕೆ ಮೆಟ್ಟಿಲುಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಶ್ರವಣ ಮಾಸದಲ್ಲಿ ಇಲ್ಲಿ ಭಕ್ತರ ಜಾತ್ರೆ ಸೇರಿತ್ತದೆ, ನಿತ್ಯ ಪೂಜಾ ಕಾರ್ಯಕ್ರಮ ನಡೆಯುತ್ತವೆ, ಸುಪ್ರಸಿದ್ದ ಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ಬಾಗಿಲು ಇರುವುದಿಲ್ಲ, ದೇವಾಲಯವು ಸುಮಾರು 600 ವರ್ಷಗಳ ಇತಿಹಾಸ ಹೊಂದಿರುತ್ತದೆ, ಇಲ್ಲಿ ಪೊಲೀಸ್ ಚೌಕಿ ಇದ್ದು ಚೌಕಿಗೆ ವೈರ್‌ಲೆಸ್ ರಿಪೀಟರ್ ಅಳವಡಿಸಲಾಗಿದೆ ಆದರೂ ದುಷ್ಕರ್ಮಿಗಳು ದೇವಾಲಯಕ್ಕೆ ನುಗ್ಗಿ ದೇವಾಲಯದ ಬಳಿ ಇಟ್ಟಿದ ಹುಂಡಿಯನ್ನು ಅಪಹರಿಸಿಕೊಂಡು ಹೋಗಿ ಅದರಲ್ಲಿ ಇದ್ದ ಹಣ ತೆಗೆದುಕೊಂಡು ಸಮೀಪದಲ್ಲೇ ಹುಂಡಿ ಎಸೆದು ಹೋಗಿರುತ್ತಾರೆ, ಅದರ ಪಕ್ಕದಲ್ಲಿ ಇದ್ದು ಪೊಲೀಸ್ ಚೌಕಿಯ ಗೇಟ್‌ನ ಬೀಗ ಮುರಿದ ಕಳ್ಳರು ವೈರ್ ಲೆಸ್ ರಿಪೀಟರ್‌ನನ್ನು ಕಳ್ಳತನ ಮಾಡಿದ್ದಾರೆ, ಈ ಸಂಬಂಧ ದೇವಾಲಯದ ಕಾರ್ಯನಿರ್ವಾಣಾಧಿಕಾರಿ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಬೆರಳಚ್ಚು ಹಾಗೂ ಶ್ವಾನದಳ ತಜ್ಞರು ಬೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ, ಪ್ರಕರಣ ದಾಖಲಾಗಿದ್ದು ತನಿಖೆ ಚುರುಕು ಗೊಂಡಿದೆ.

ಭಕ್ತರ ಆಕ್ರೋಶ: ದೇವಾಲಯಕ್ಕೆ ಬಾಗಿಲು ಇರುವುದಿಲ್ಲ ಹಾಗೂ ದೇವಸ್ಥಾನಕ್ಕೆ ಯಾವುದೇ ಭದ್ರತೆ ಇರುವುದಿಲ್ಲ ಹುಂಡಿಯ ಸುರಕ್ಷತ ಸ್ಥಳದಲ್ಲಿ ಇಡದ ಕಾರಣ ಕಳ್ಳತನಕ್ಕೆ ಕಾರಣವಾಗಿದೆ, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಭಕ್ತರು ಆಕ್ರೋಶ ಹೊರ ಹಾಕಿದ್ದಾರೆ, ಈ ಸಂಬಂಧ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಭಕ್ತರು ಆಗ್ರಪಡಿಸಿದ್ದಾರೆ.

ಇದನ್ನೂ ಓದಿ: ಮಾರ್ಚ್ ಒಳಗೆ ಪೂರ್ಣ ಅನುದಾನ ಬಳಕೆ ಮಾಡಿ: ಅಧಿಕಾರಿಗಳಿಗೆ ಸಚಿವ ಕೋಟ ಸೂಚನೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next