Advertisement
ಬುಧವಾರ ನಗರದ ಪ್ರಸ್‌ಕ್ಲಬ್‌ನಲ್ಲಿ ಆಯೋಜಿಸಲಾದ ಪತ್ರಿಕಾ ಸಂವಾದದಲ್ಲಿ ಅವರು ಜಿಲ್ಲೆ ಹಾಗೂ ನಗರ ವ್ಯಾಪ್ತಿಯ ಹಲವು ಸಮಸ್ಯೆಗಳನ್ನು ಪತ್ರಕರ್ತರೊಂದಿಗೆ ಚರ್ಚಿಸಿದರು.
Related Articles
Advertisement
ಪ್ರವಾಸೋದ್ಯಮಕ್ಕೆ ಪ್ರತ್ಯೇಕ ಪೋರ್ಟಲ್ಬಹುಸಂಖ್ಯೆಯಲ್ಲಿ ಶಿಕ್ಷಣ, ಆರೋಗ್ಯ, ಧಾರ್ಮಿಕ ಕೇಂದ್ರಗಳ ಜತೆಗೆ ಬೀಚ್‌ಗಳಿಂದ ಕೂಡಿರುವ ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಇಂಟಿಗ್ರೇಟೆಡ್ ಪೋರ್ಟಲ್ ಅಭಿವೃದ್ಧಿ ಪಡಿಸಲಾಗಿದ್ದು, ಅದನ್ನು ಜಾರಿಗೊಳಿಸಲಾಗುವುದು. ಜಿಲ್ಲಾ ಪ್ರವಾಸೋದ್ಯಮ ಸಮಿತಿ ಮೂಲಕ, ಸ್ಥಳೀಯ ಪಾಲುದಾರರ ಮೂಲಕ ನಿರ್ವಹಣೆ ಮಾಡಲಾಗುವುದು. ಸರ್ಫಿಂಗ್, ಪಿಲಿಕುಳದ ಡಾ| ಶಿವರಾಮ ಕಾರಂತ ನಿಸರ್ಗಧಾಮವನ್ನು ಒಳಗೊಂಡು ಜಿಲ್ಲೆಯ ಎಲ್ಲ ಪ್ರವಾಸಿ ಕೇಂದ್ರಗಳನ್ನು ಕ್ರೋಡೀಕರಿಸಿ “ಕಾರ್ಯಕ್ರಮ ಆಧಾರಿತ ಪ್ರವಾಸೋದ್ಯಮ’ ಯೋಜನೆಯ ರೂಪಿಸುವ ಉದ್ದೇಶವಿದೆ ಎಂದರು. ಶಾಲೆಗೆ ರಜೆ ಉಂಟಾ ಸಾರ್!
ರೆಡ್ ಅಲರ್ಟ್ ಸಂದರ್ಭ ಮಕ್ಕಳಿಂದ ಸಾಕಷ್ಟು ಕರೆಗಳು ಬರುತ್ತಿದ್ದವು. ತಡರಾತ್ರಿ, ಬೆಳಗ್ಗೆ ನಾಲ್ಕು ಗಂಟೆಗೆಲ್ಲ ಕರೆ ಬರುತ್ತಿತ್ತು. ತುರ್ತು ಕರೆ ಎಂದು ಭಾವಿಸಿ ತೆಗೆದರೆ ಮಕ್ಕಳು “ಶಾಲೆಗೆ ರಜೆ ಉಂಟಾ ಸಾರ್’! ಎಂದು ಕೇಳುತ್ತಿದ್ದರು. ಪಿಯುಗೆ ಕೊಟ್ಟಿದ್ದೀರಿ ನಮಗೆ ಯಾಕೆ ಕೊಟ್ಟಿಲ್ಲ ಎಂದು ಪದವಿಯವರು ಕೇಳುತ್ತಿದ್ದರು. ಹಾಗೇ ವೃತ್ತಿಪರ ಶಿಕ್ಷಣ ವಿಭಾಗದವರೂ ಕರೆ ಮಾಡುತ್ತಿದ್ದರು. ಮಳೆಗಾಲದಲ್ಲಿ ತರಗತಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇರುವುದರಿಂದ ಕರಾವಳಿಗೆ ಪ್ರತ್ಯೇಕ ಶೈಕ್ಷಣಿಕ ವೇಳಾಪಟ್ಟಿ
ರಚಿಸುವ ಅಗತ್ಯದ ಬಗ್ಗೆಯೂ ಜಿಲ್ಲಾಧಿಕಾರಿ ಪ್ರಸ್ತಾವಿಸಿದರು.