Advertisement
ಕೇವಲ ನಂಬರ್ ಪ್ಲೇಟ್, ಬ್ರೇಕ್‌ಲೈಟ್ ಮಾತ್ರವಲ್ಲ, ಇಂತಹ ಸರಕು ಸಾಗಾಟ ವಾಹನಗಳನ್ನು ಶಿಲೆಕಲ್ಲು, ಇಟ್ಟಿಗೆ, ಜಲ್ಲಿ ಕಲ್ಲು, ಮರಳುವಿನಂತಹ ವಸ್ತುಗಳನ್ನು ಸಾಗಾಟ ಮಾಡಬೇಕಾದರೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಕೆಲವೊಂದು ಮಾರ್ಗಸೂಚಿಗಳನ್ನು ನೀಡಿದೆ. ಆದರೆ ಇದ್ಯಾವುದನ್ನು ಈ ವಾಹನಗಳ ಚಾಲಕರು ಪಾಲಿಸುತ್ತಿಲ್ಲ.ಇತ್ತೀಚಿನ ದಿನಗಳಲ್ಲಿ ಕುಂದಾಪುರ – ಬೈಂದೂರುವರೆಗಿನ ರಾಷ್ಟ್ರೀಯ ಹೆದ್ದಾರಿ, ಕುಂದಾಪುರ – ಸಿದ್ದಾಪುರ ಹಾಗೂ ಕೋಟೇಶ್ವರ – ಹಾಲಾಡಿ ರಾಜ್ಯ ಹೆದ್ದಾರಿಗಳಲ್ಲೂ ಈ ಟಿಪ್ಪರ್ ಲಾರಿಗಳು ನಿಯಮ ಬಾಹಿರವಾಗಿ ಶಿಲೆ ಕಲ್ಲುಗಳು, ಜಲ್ಲಿ ಕಲ್ಲು, ಮಾತ್ರವಲ್ಲದೆ ಇಟ್ಟಿಗೆಗಳನ್ನು ಸಾಗಾಟ ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಇನ್ನು ಈ ಟಿಪ್ಪರ್ ಲಾರಿಗಳ ಹಿಂದೆ ಸಂಚರಿಸುವ ಬೈಕ್, ರಿಕ್ಷಾ, ಕಾರು ಸವಾರರು ಮಾತ್ರ ಜೀವವನ್ನು ಕೈಯಲ್ಲಿ ಹಿಡಿದು ವಾಹನ ಚಲಾಯಿಸಬೇಕಾದ ಪರಿಸ್ಥಿತಿ.
ಕಲ್ಲುಗಳನ್ನು ಸಾಗಿಸುವ ಟಿಪ್ಪರ್ ವಾಹನದ ಹಿಂದೆ ಸಂಚರಿಸುವುದೇ ಒಂದು ಸವಾಲಿನ ಸಂಗತಿ. ಅವರು ಯಾವಾಗ ನಿಲ್ಲಿಸುತ್ತಾರೋ ಗೊತ್ತಾಗುವುದಿಲ್ಲ. ಇನ್ನು ಅದರ ಸಣ್ಣ-ಸಣ್ಣ ಕಣಗಳ ಹುಡಿಗಳು ಬೈಕ್‌ನಲ್ಲಿ ಸಂಚರಿಸುವಾಗ ನಮ್ಮ ಕಣ್ಣಿಗೆ ತೊಂದರೆ ಉಂಟು ಮಾಡುತ್ತದೆ. ಇದಕ್ಕೆ ಸಂಬಂಧಪಟ್ಟವರು ಕಡಿವಾಣ ಹಾಕಬೇಕಾದ ಅನಿವಾರ್ಯತೆಯಿದೆ.
ಬೈಕ್ ಸವಾರ, ಬಿದ್ಕಲ್‌ಕಟ್ಟೆ