Advertisement

Kundapura; ಇಂದು, ನಾಳೆ ಅತಿಥಿ ಶಿಕ್ಷಕರ ಮುಷ್ಕರ

11:28 PM Aug 22, 2023 | Team Udayavani |

ಕುಂದಾಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆ. 23 ಮತ್ತು 24ರಂದು ಅತಿಥಿ ಶಿಕ್ಷಕರು ಸರಕಾರಿ ಶಾಲೆಗಳಿಂದ ಹೊರಬಂದು ಪ್ರತಿಭಟನೆ ನಡೆಸಲಿದ್ದಾರೆ.

Advertisement

ರಾಜ್ಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರು ರಾಜ್ಯದ ಸರಕಾರಿ ಶಾಲೆಗಳಲ್ಲಿ 11-12 ವರ್ಷಗಳಿಂದ ಕಡಿಮೆ ವೇತನ, ಸೇವಾ ಭದ್ರತೆ, ಕೃಪಾಂಕ ಸೇರಿದಂತೆ ಯಾವುದೇ ರೀತಿಯ ಸೌಲಭ್ಯಗಳಿಲ್ಲದಿದ್ದರೂ ಪ್ರಾಮಾಣಿಕತೆಯಿಂದ ಮಕ್ಕಳ ಶೈಕ್ಷಣಿಕ ಬದುಕನ್ನು ಕಟ್ಟಿಕೊಡುವಲ್ಲಿ ಕಾರ್ಯನಿರತವಾಗಿದೆ.

ಸರಕಾರದ ಹಂತದಲ್ಲಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರ ವರ್ಗಕ್ಕೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ ಹಾಗೂ ಮಾರ್ಚ್‌, ಜುಲೈಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದಾಗ ಅಲ್ಲಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಬಂದು ನಮ್ಮ ಅಹವಾಲು ಸ್ವೀಕರಿಸಿ ಬೇಡಿಕೆಗಳ ಈಡೇರಿಕೆಯ ಭರವಸೆ ನೀಡಿದ್ದಾರೆ.

ಸಚಿವ ಮಧು ಬಂಗಾರಪ್ಪ ಸಮ್ಮುಖದಲ್ಲಿ ಅತಿಥಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಸಭೆಯನ್ನು ಮಾಡಿದ್ದು, ಸಚಿವರು ಕೂಡ ಸೂಕ್ತ ಭರವಸೆ ನೀಡಿದ್ದಾರೆ. ಆದರೆ ಈ ವರೆಗೆ ಯಾವುದೂ ಈಡೇರಿಲ್ಲ ಎಂದು ಸಂಘ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಸಮಸ್ತ ಅತಿಥಿ ಶಿಕ್ಷಕರು ಎರಡು ದಿನಗಳ ಕಾಲ ಸಾಮೂಹಿಕವಾಗಿ ಹಾಗೂ ಸಾಂಕೇತಿಕವಾಗಿ “ಶಾಲೆ ತೊರೆಯೋಣ’ ಅಭಿಯಾನ ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next