Advertisement
ಇಲ್ಲಿನ ಗೋಕುಲ್ ಕಾಂಪ್ಲೆಕ್ಸ್‌ನ ಕೆ. ಸೀತಾರಾಮ (73) ಅವರು ನಗರದ ಮುಖ್ಯ ರಸ್ತೆಯಲ್ಲಿರುವ ಜಾಗ ಖರೀದಿಸಿ ಗೋಕುಲ್ ಡಿಲಕ್ಸ್ ಹೊಟೇಲ್ ವ್ಯವಹಾರ ಮಾಡಿಕೊಂಡಿದ್ದಾರೆ. ಈ ಜಾಗದ ಬಗ್ಗೆ ನಾಗರಾಜ್ ಅವರು ಸಿವಿಲ್ ದಾವೆ ಹೂಡಿದ್ದು ಸೀತಾರಾಮ ಅವರ ಪರವಾಗಿ ಆದೇಶವಾಗಿದೆ. ಹಾಗಿದ್ದರೂ ಆಪಾದಿತರಾದ ನಾಗರಾಜ್ ಹಾಗೂ ಮಗ ಗಣೇಶ ಇತರ 3-4 ಜನರೊಂದಿಗೆ ಹೊಟೇಲ್ ಬಳಿ ಬಂದು ಹೊಟೇಲ್ ಜಾಗದಲ್ಲಿ ಇಟ್ಟ ಸಾಮಾಗ್ರಿಗಳನ್ನು ತೆಗೆಯಲು ಪ್ರಯತ್ನಿಸಿದುದರಿಂದ ಸೀತಾರಾಮ ಅವರು ಆಕ್ಷೇಪಿಸಿದ್ದಾರೆ. ಹಾಗಾಗಿ ಸೀತಾರಾಮ ಅವರನ್ನು ದೂಡಿ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. Advertisement
Kundapura: ಬೆದರಿಕೆ; ಉದ್ಯಮಿ ದೂರು
08:33 PM Aug 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.