Advertisement

Kundapura ವಿದ್ಯಾರ್ಥಿ ಶವ ಬೀಚ್‌ನಲ್ಲಿ ಪತ್ತೆ

12:50 AM May 05, 2024 | Team Udayavani |

ಕುಂದಾಪುರ: ಕೋಟೇಶ್ವರದ ಖಾಸಗಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಬೆಂಗಳೂರು ಮೂಲದ ಯಮುನರಾಜ್‌ (22) ಅವರ ಮೃತದೇಹ ಮೇ 4ರಂದು ಕೋಡಿಯ ಸೀವಾಕ್‌ ಬಳಿ ಪತ್ತೆಯಾಗಿದೆ.

Advertisement

ಕೋಡಿ ಸೀವಾಕ್‌ ಬಳಿಯ ದೋಣಿಯಲ್ಲಿ ಮೇ 3ರ ಸಂಜೆ 5 ಗಂಟೆಯ ಸುಮಾರಿಗೆ ಮೀನುಗಾರಿಕೆ ಮಾಡುತ್ತಿದ್ದ ಗುರುರಾಜ್‌ ಅವರಿಗೆ ಸಮುದ್ರದ ನೀರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ತೇಲುತ್ತಿದ್ದುದು ಕಂಡಿದೆ. ಆ ಬಳಿಕ ಆ ಮೃತದೇಹವನ್ನು ದೋಣಿಯಲ್ಲಿ ಹಾಕಿಕೊಂಡು ದಡಕ್ಕೆ ತಂದಿದ್ದರು. ಆರಂಭದಲ್ಲಿ ಇದು ಅಪರಿಚಿತ ಮೃತದೇಹವಾಗಿದ್ದು, ಸೀವಾಕ್‌ ಬಳಿ ಸೈಕಲ್‌ವೊಂದು ಪತ್ತೆಯಾಗಿದ್ದು, ಅದರೊಂದಿಗೆ ದೇಹದಲ್ಲಿದ್ದ ದಾಖಲೆಗಳ ಮೂಲಕ ಪತ್ತೆ ಹಚ್ಚಲಾಯಿತು.

ಬೆಂಗಳೂರು ನೆಲಮಂಗಲ ಮೂಲದ ಪ್ರಕಾಶ್‌ ಜಿ. ಅವರ ಪುತ್ರ ಯಮುನರಾಜ್‌ ಮೃತಪಟ್ಟವರೆಂದು ತಿಳಿದುಬಂದಿದೆ.

ಪ್ರತೀದಿನ ರಾತ್ರಿ ತಪ್ಪದೇ ವೈದ್ಯೆಯಾಗಿರುವ ತನ್ನ ಅಕ್ಕನಿಗೆ ಯಮುನರಾಜ್‌ ಕರೆ ಮಾಡಿ ಮಾತಾಡುತ್ತಿದ್ದರು. ಎರಡು ದಿನ ಗಳಲ್ಲಿ ಪರೀಕ್ಷೆಯಿದ್ದು, ಅದಕ್ಕೂ ತಯಾರಾಗುತ್ತಿದ್ದೇನೆ ಎಂದು ತಿಳಿಸಿದ್ದು, ಆದರೆ ಮೇ 2ರ ರಾತ್ರಿ ಕರೆ ಮಾಡಿರಲಿಲ್ಲ, ಕಲಿಕೆಯಲ್ಲಿಯೂ ಮುಂಚೂಣಿಯಲ್ಲಿದ್ದ ಎನ್ನುವುದಾಗಿ ಮನೆಯವರು ಹೇಳಿಕೊಂಡಿದ್ದಾರೆ.

ಯಮುನರಾಜ್‌ ಹೆತ್ತವರು, ಅಕ್ಕ, ಸಂಬಂಧಿಕರು ಬೆಂಗಳೂರಿನಿಂದ ಆಗಮಿಸಿದ್ದು, ಕಾಲೇಜಿನ ಪ್ರಾಂಶು ಪಾಲರು, ಉಪನ್ಯಾಸಕರು ಆಗಮಿಸಿ ಮೃತದೇಹವನ್ನು ಗುರುತಿಸಿ ದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದೆ.

Advertisement

ಘಟನ ಸ್ಥಳಕ್ಕೆ ಪೊಲೀಸ್‌ ವೃತ್ತ ನಿರೀಕ್ಷಕ ನಂದಕುಮಾರ್‌, ಹೆಡ್‌ಕಾನ್‌ಸ್ಟೆಬಲ್‌ ರಾಘವೇಂದ್ರ ಶೇರಿಗಾರ್‌ ಹಾಗೂ ಸಿಬಂದಿ ಭೇಟಿ ನೀಡಿದರು. ಕುಂದಾಪುರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಿಮೆ ಅಂಕ ಕಾರಣ?
ಕೋಟೇಶ್ವರದ ಆಯುರ್ವೇದ ಕಾಲೇಜಿನಲ್ಲಿ ಯಮುನರಾಜ್‌ ಎರಡನೇ ವರ್ಷದ ಬಿಎಂಎಸ್‌ ವ್ಯಾಸಂಗ ಮಾಡುತ್ತಿದ್ದು, ಕೋಟೇಶ್ವರದ ಪಿಜಿಯೊಂದರಲ್ಲಿ ನೆಲೆಸಿದ್ದರು. ಮೇ 2ರ ಸಂಜೆ 4 ಗಂಟೆಗೆ ಪಿಜಿಯಿಂದ ಹೊರಟಿದ್ದು, ಮೊಬೈಲ್‌ ಅನ್ನು ರೂಮ್‌ನಲ್ಲಿಯೇ ಬಿಟ್ಟು ಹೋಗಿದ್ದ. ಸ್ನೇಹಿತರು ಹೇಳುವ ಪ್ರಕಾರ ಆಂತರಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತೆಂದು ಕಳೆದ ಕೆಲವು ದಿನಗಳಿಂದ ತುಸು ಮಂಕಾಗಿದ್ದ. ಅಂಕ ಕಡಿಮೆ ಆಯಿತೆಂದು ನೊಂದು, ಸೀವಾಕ್‌ಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎನ್ನುವ ಸಂಶಯವಿದೆ. ಆದರೆ ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕವೋ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ನಿರ್ದಿಷ್ಟ ಕಾರಣ ಏನೆಂದು ಇನ್ನಷ್ಟೇ ತಿಳಿದು ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next