Advertisement
ಕೋವಿಡ್-19 ಸೋಂಕು ಶಂಕೆಯ ಹಿನ್ನೆಲೆಯಲ್ಲಿ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅದರ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಆರೊಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್-19 ಹಾಟ್‌ಸ್ಪಾಟ್ ಆಗಿರುವ ಮಹಾರಾಷ್ಟ್ರದಿಂದಲೇ 3031 ಮಂದಿ ಜಿಲ್ಲೆಗೆ ಆಗಮಿಸಿರುವುದು ಆತಂತಕ್ಕೆ ಕಾರಣವಾಗಿದೆ. ಉಳಿದಂತೆ ತೆಲಂಗಾಣದಿಂದ 369, ತಮಿಳುನಾಡಿನಿಂದ 55, ಕೇರಳದಿಂದ 46, ಗೋವಾದಿಂದ 32, ಆಂಧ್ರಪ್ರದೇಶದಿಂದ 31, ಗುಜರಾತ್‌ನಿಂದ 22 ಮಂದಿ ಜಿಲ್ಲೆಗೆ ಆಗಮಿಸಿದ್ದಾರೆ. ಜಿಲ್ಲೆಗೆ ಮುಂಬಯಿ ಆತಂಕ
ತಿಂಗಳಿಗೂ ಅಧಿಕ ಕಾಲ ಹಸಿರು ವಲಯದಲ್ಲಿದ್ದ ಉಡುಪಿ ಜಿಲ್ಲೆಗೆ 47 ದಿನಗಳ ಬಳಿಕ ದುಬೈ ಪ್ರಯಾಣಿಕರಿಂದ ಕೋವಿಡ್-19 ಸೋಂಕು ಕಾಣಿಸಿಕೊಂಡಿತ್ತು. ವಿದೇಶದಿಂದ ಆಗಮಿಸಿದ ಜಿಲ್ಲೆಯ 49 ಮಂದಿಯಲ್ಲಿ 6 ಜನರಿಗೆ ಶುಕ್ರವಾರ ಸೋಂಕು ಕಂಡುಬಂದಿತ್ತು. ಈಗ ಮಹಾರಾಷ್ಟ್ರದಿಂದ ಆಗಮಿಸಿದವರ ಬಗ್ಗೆ ನಿಗಾ ಇರಿಸಲಾಗುತ್ತಿದೆ. ಲಾಕ್ ಡೌನ್‌ನಿಂದಾಗಿ ತೆಲಂಗಾಣ, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಒರಿಸ್ಸಾ, ಗೋವಾ, ಪಶ್ಚಿಮ ಬಂಗಾಳ, ರಾಜಸ್ತಾನ, ಹೊಸದಿಲ್ಲಿ ಸಹಿತ ಹಲವು ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡವರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಇವರನ್ನೆಲ್ಲ ಜಿಲ್ಲಾಡಳಿತವು ಸ್ಥಳೀಯ ತಾಲೂಕು ಆಡಳಿತದ ಮೂಲಕ ಗುರುತಿಸಲ್ಪಟ್ಟ ಹಾಸ್ಟೆಲ್‌ಗಳಲ್ಲಿ ಮತ್ತು ಹೊಟೇಲ್ ಲಾಡ್ಜ್ ಗಳಲ್ಲಿ ಕ್ವಾರಂಟೈನ್ ಮಾಡಿದೆ.