Kundapura: ಪುರಸಭೆಗಳಲ್ಲಿ ಕಾಪು, ಕುಂದಾಪುರ ಮುಂಚೂಣಿ
ಪಿಎಂ ಸ್ವನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡಿಕೆ
Team Udayavani, Jan 16, 2025, 2:45 PM IST
ಕುಂದಾಪುರ: ಬೀದಿ ಬದಿ ಮತ್ತು ಸಣ್ಣ ವ್ಯಾಪಾರಿಗಳನ್ನು ಮೀಟರ್ ಬಡ್ಡಿ ಮಾಫಿಯಾದಿಂದ ಕಾಪಾಡುವ ಉದ್ದೇಶದಿಂದ ಕೇಂದ್ರ ಸರಕಾರ ಪರಿಚಯಿಸಿರುವ ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ವಿಚಾರದಲ್ಲಿ ಉಡುಪಿ ಹಾಗೂ ದ.ಕ. ಜಿಲ್ಲೆಯ ಪುರಸಭೆಗಳ ಪೈಕಿ ಕಾಪು ಹಾಗೂ ಕುಂದಾಪುರ ಪುರಸಭೆ ಅಗ್ರಸ್ಥಾನದಲ್ಲಿದೆ. ಇವೆರಡೂ ಪುರಸಭೆ ವ್ಯಾಪ್ತಿಯಲ್ಲಿ ಸಾಲದ ಮೊತ್ತ 2 ಕೋ.ರೂ. ದಾಟಿದೆ.
ಈ ಯೋಜನೆಯಡಿ ಬೀದಿಬದಿಯ ವ್ಯಾಪಾರಿಗಳಿಗೆ ಮೂರು ಹಂತಗಳಲ್ಲಿ 10, 20, 50 ಸಾವಿರ ರೂ.ಸಾಲ ದೊರೆಯುತ್ತದೆ. ಇದನ್ನು ಒಂದು ವರ್ಷದ ಅವಧಿಯಲ್ಲಿ ಮಾಸಿಕ ಕಂತುಗಳಲ್ಲಿ ತೀರಿಸಬೇಕು. ಅವ ಧಿಯೊಳಗೆ ಮರುಪಾವತಿ ಮಾಡುವವರಿಗೆ ಬಡ್ಡಿಯಲ್ಲಿ ಶೇ. 7ರಷ್ಟು ಸಬ್ಸಿಡಿ ನೀಡಲಾಗುತ್ತದೆ. ತ್ತೈಮಾಸಿಕ ಪಾವತಿಗೂ ಅವಕಾಶ ಇದ್ದು ಡಿಜಿಟಲ್ ವಹಿವಾಟಿನ ಮೇಲೆ ಮಾಸಿಕ ಪ್ರೋತ್ಸಾಹ ಕ್ಯಾಶ್ ಬ್ಯಾಕ್ ನೀಡಲಾಗುತ್ತದೆ. ಅವ ಧಿಯೊಳಗೆ ಸಾಲಮರುಪಾವತಿ ಮಾಡಿದವರ ಸಾಲದ ಅರ್ಹತೆ ಏರಿಕೆಯಾಗುತ್ತಾ ಹೋಗುತ್ತದೆ. ದೇಶಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಈ ಯೋಜನೆ ಜಾರಿಯಲ್ಲಿದೆ. ಯಾವುದೇ ಆಧಾರ, ಅಡಮಾನ ಇಲ್ಲದೇ. ಸ್ಥಳೀಯಾಡಳಿತ ನೀಡುವ, ಬೀದಿಬದಿ ವ್ಯಾಪಾರಿ ಎಂಬ ಗುರುತಿನ ಚೀಟಿ ಸಾಕು.
ಹಣ್ಣು, ತರಕಾರಿ, ಬಟ್ಟೆ, ಫ್ಯಾನ್ಸಿ ವಸ್ತುಗಳು ಸೇರಿದಂತೆ ಸಣ್ಣಪುಟ್ಟ ವಸ್ತುಗಳನ್ನು ಬೀದಿಬದಿ ಗುಡ್ಡೆ ಹಾಕಿ ಮಾರುವ ದಿನ ಸಂಪಾದನೆಯ ಬಡವರೂ ನಂಬಿಕೆಗೆ ಅರ್ಹರು ಎಂದು ನಿರೂಪಿಸಿದೆ. ಇವರೆಲ್ಲ ಖಾಸಗಿ ಲೇವಾದೇವಿದಾರರಿಂದ ದಿನದ ಬಡ್ಡಿಯಲ್ಲಿ ಬಂಡವಾಳ ಹಾಕಿ ವಸ್ತುಗಳನ್ನು ತಂದು ಮಾರಾಟ ಮಾಡಿ ಅಧಿಕ ಬಡ್ಡಿ ನೀಡಿ ಸಂದಾಯ ಮಾಡಬೇಕಿತ್ತು. ಅಂತಹವರಿಗೆ ಪಿಎಂ ಸ್ವನಿಧಿ ವರದಾನವಾಗಿದೆ.
ರಾಜ್ಯದಲ್ಲಿ 6,82,716 ಮಂದಿ ಅರ್ಹ ಫಲಾನುಭವಿಗಳಿದ್ದು 5,84,596 ಮಂದಿಗೆ ಮಂಜೂರಾಗಿದೆ. 5,60,640 ಮಂದಿ 824.84 ಕೋ.ರೂ.ಹಣ ಪಡೆದಿದ್ದಾರೆ.
ನಗರಸಭೆಯಲ್ಲಿ ಉಡುಪಿ ಮುಂದೆ
ನಗರಸಭೆಗಳ ಅಂಕಿಅಂಶ ಗಮನಿಸಿದರೆ ಉಡುಪಿ ಅಗ್ರಣಿಯಾಗಿದೆ. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 2,370 ಫಲಾನುಭವಿಗಳಿಗೆ 8.73 ಕೋ.ರೂ. ಮಂಜೂರಾಗಿ 8.46 ಕೋ.ರೂ. ವಿತರಿಸಲಾಗಿದೆ. ಉಳ್ಳಾಲದಲ್ಲಿ 925 ಮಂದಿಗೆ 2.27 ಕೋ.ರೂ. ಮಂಜೂರಾಗಿ 2.22 ಕೋ.ರೂ. ವಿತರಿಸಲಾಗಿದೆ. ಪುತ್ತೂರಿನಲ್ಲಿ 841 ಮಂದಿ ಫಲಾನುಭವಿಗಳಿಗೆ 1.94 ಕೋ.ರೂ. ಮಂಜೂರಾಗಿ 1.88 ಕೋ.ರೂ. ನೀಡಲಾಗಿದೆ.
ಯಾವ ಪುರಸಭೆ: ಎಷ್ಟೆಷ್ಟು ಸಾಲ?
ಗುರಿ ತಲುಪಿದೆ
ಪಿಎಂ ಸ್ವನಿಧಿ ಯೋಜನೆಯಲ್ಲಿ ಸರಕಾರ ನೀಡಿದ ಗುರಿ ತಲುಪಲಾಗಿದೆ. ಅರ್ಹರಿಗೆ ಯಾವುದೇ ತೊಂದರೆ ಆಗದಂತೆ ಸಾಲ ದೊರೆಯಬೇಕೆಂಬ ಆಶಯ ಈಡೇರಿದೆ. ಅರ್ಜಿಗಳನ್ನು ಬಾಕಿ ಉಳಿಸದಂತೆ ಕ್ರಮ ವಹಿಸಲಾಗಿದೆ.
-ಆನಂದ್ ಜಿ. ಮುಖ್ಯಾಧಿಕಾರಿ, ಕುಂದಾಪುರ ಪುರಸಭೆ
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rajvardhan: ಅಖಾಡಕ್ಕೆ ಬಂದ ʼಗಜರಾಮʼ; ಫೆ.7ಕ್ಕೆ ಚಿತ್ರ ಬಿಡುಗಡೆ
Smaran Ravichandran: ತಾಯಿಯ ಒತ್ತಾಯಕ್ಕೆ ಬ್ಯಾಟ್ ಹಿಡಿದವ ಇಂದು ಕರ್ನಾಟಕದ ರನ್ ಮಶಿನ್
BJP: ನಾನು, ಯತ್ನಾಳ್, ಸುಧಾಕರ್ ಬಿಜೆಪಿ ಶುದ್ಧೀಕರಣ ಮಾಡುತ್ತಿದ್ದೇವೆ: ಕೆ.ಎಸ್.ಈಶ್ವರಪ್ಪ
Bihar; ಮಹಾತ್ಮಾ ಗಾಂಧಿ ಪುಣ್ಯತಿಥಿ: ಚಪ್ಪಾಳೆ ತಟ್ಟಿ ಸಿಎಂ ನಿತೀಶ್ ಯಡವಟ್ಟು!!
Maha Kumbh: ಪ್ರಯಾಗ್ ರಾಜ್ ನಲ್ಲಿ ಮತ್ತೆ ಬೆಂಕಿ… 15 ಟೆಂಟ್ ಗಳು ಬೆಂಕಿಗಾಹುತಿ