ಕುಂದಾಪುರ: ಗ್ರಾಮಾಂತರ ಠಾಣೆ ಎಸ್‌ಐ ಪವನ್ ನಾಯಕ್ ಸಿಬಂದಿ ಜತೆ ಅಕ್ರಮ ಗೋವಧೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಗುಲ್ವಾಡಿ ಗ್ರಾಮದ ಕುದ್ರು ಎಂಬಲ್ಲಿ ಅಬ್ದುಲ್ ಸಮದ್ ಮನೆಯ ಪಕ್ಕದಲ್ಲಿ ಗೋವುಗಳನ್ನು ಅಕ್ರಮವಾಗಿ ವಧೆ ಮಾಡಿ ಮಾಂಸ ತಯಾರಿಸುತ್ತಿರುವ ಮಾಹಿತಿಯಂತೆ ದಾಳಿ ಮಾಡಿದಾಗ 3 ಜನರು ಓಡಿ ಹೋಗಿದ್ದು, ಆರೋಪಿ ಮೊಹಮ್ಮದ್ ಯೂಸುಬ್‌ನನ್ನು ಹಿಡಿಯಲಾಗಿದೆ.
ಗೋವಿನ ತುಂಡರಿಸಿದ ಮಾಂಸ, ಗೋವಿನ 2 ತಲೆ, ಗೋವಿನ 8 ಕಾಲುಗಳು ಮತ್ತಿತ್ತರ ತ್ಯಾಜ್ಯಗಳು ಶೆಡ್‌ನಲ್ಲಿ ಹರಡಿಕೊಂಡಿತ್ತು. ಒಂದು ಜೀವಂತ ಗೋವನ್ನು ಕಟ್ಟಿ ಹಾಕಲಾಗಿತ್ತು. ಮೊಹಮ್ಮದ್ ಯೂಸುಬ್, ಮೊಯ್ದಿನ್ ಹಾಗೂ ನಾಸೀರ್‌ಆಲಿ ಸೇರಿ ಗುಲ್ವಾಡಿ ಬೊಳುಕಟ್ಟೆ ಎಂಬಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ 3 ಗೋವುಗಳನ್ನು ಕಳವು ಮಾಡಿ 2ನ್ನು ವಧಿಸಿ ಮಾಂಸ ಮಡಿದ್ದರು. 73 ಕೆ.ಜಿ ಗೋಮಾಂಸ, 1 ಗೋವು ಇತರ ಸ್ವತ್ತುಗಳನ್ನು ಸ್ವಾ ಧೀನಪಡಿಸಿಕೊಳ್ಳಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋವಿ ಕಳವು
ಕುಂದಾಪುರ: ಕಟ್‌ಬೆಲೂ¤ರು ಗ್ರಾಮದ ಹರೆಗೋಡು ತ್ರಿಷಿಲಾ ಮೆಂಡೋನ್ಸಾ ಅವರ ಮನೆಯಿಂದ ಕೋವಿ ಕಳವಾಗಿದೆ. ಅವರ ಪತಿ ಚಾರ್ಲಿ ಮೆಂಡೋನ್ಸಾ ಕೋವಿ ಪರವಾನಿಗೆ ಹೊಂದಿದ್ದು, ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ತಾಲೂಕು ಕಚೇರಿಗೆ ಪರವಾನಿಗೆ ಮರಳಿಸಲು ಹೋಗಿದ್ದು, ಅಲ್ಲಿ ಅವರು ಮೂಲ ಪರವಾನಿಗೆ ಬೇಕೆಂದ ಕಾರಣ ತಾವು ಪತಿ ಜತೆಗೆ ವಾಸವಿದ್ದ ಕಟ್‌ಬೆಲೂ¤ರು ಗ್ರಾಮದ ಹರೆಗೋಡು ಮನೆಯಲ್ಲಿ ಕೋವಿಯನ್ನು ಇಟ್ಟಿದ್ದರು. ಅದು ಕಳವಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಷ್ಯಾದಿಂದ ತೈಲ ಆಮದು ಹೆಚ್ಚಳ: ದಿನವೊಂದಕ್ಕೆ 10 ಲಕ್ಷ ಬ್ಯಾರಲ್ ಕಚ್ಚಾ ತೈಲ ಆಮದು