ಕುಂದಾಪುರ: ನದಿಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಗ್ಗೆ ರಾ.ಹೆ. 66ರ ತಲ್ಲೂರು ಸಮೀಪದ ರಾಜಾಡಿಯಲ್ಲಿ ನಡೆದಿದೆ.
ಕನ್ಯಾನ ಗ್ರಾಮದ ದಿ| ಕುಪ್ಪಯ್ಯ ಶೆಟ್ಟಿ ಅವರ ಪುತ್ರ ರವಿರಾಜ್ ಶೆಟ್ಟಿ (33) ಆತ್ಮಹತ್ಯೆ ಮಾಡಿಕೊಂಡ ಯುವಕ.
ಅನಾರೋಗ್ಯದಿಂದ ಬಳಲುತ್ತಿದ್ದ, ಕುಡಿತದ ಚಟ ಹೊಂದಿದ್ದ ರವಿರಾಜ್ ಅವರನ್ನು ತಾಯಿ ಶನಿವಾರ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ವೇಳೆ ಅಲ್ಲಿಂದ ಹೇಳದೆ ಕೇಳದೇ ಬಂದು, ತಲ್ಲೂರು ಸಮೀಪದ ರಾಜಾಡಿಯ ಹೆದ್ದಾರಿಯಲ್ಲಿರುವ ಸೇತುವೆ ಮೇಲಿನಿಂದ ನದಿಗೆ ಹಾರಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಮೃತದೇಹವನ್ನು ಮೇಲೆತ್ತಲಾಗಿದೆ.
Related Articles
ರವಿರಾಜ್ ಶೆಟ್ಟಿ ತಂದೆ ಕೆಲ ತಿಂಗಳ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಸಹೋದರಿಗೆ ಮದುವೆ ಮಾಡಿಕೊಡಲಾಗಿದೆ. ಈಗ ಇದ್ದ ಒಬ್ಬ ಮಗನನ್ನು ತಾಯಿ ಕಳೆದುಕೊಂಡಂತಾಗಿದೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಭಾರತೀಯರಿಗೆ ದಾಖಲೆ ವೀಸಾ ವಿತರಣೆಗೆ ಅಮೆರಿಕ ಸಜ್ಜು