ಕುಂದಾಪುರ : ಕುಡಿತಕ್ಕೆ ಹಣ ನೀಡಲಿಲ್ಲ ಎಂದು ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
ಚಂದಮ್ಮ ಶೆಟ್ಟಿ ಸಳ್ವಾಡಿ ಅವರ ಪುತ್ರ ಗೋವಾದಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದು, ಅವರ ಹೊಟೇಲ್‌ನಲ್ಲಿ ಅನಾಥನಾಗಿ ಕೆಲಸ ಮಾಡಿಕೊಂಡಿದ್ದ ವಿಟ್ಟಲ (48) ಅವರನ್ನು ಚಂದಮ್ಮ ಶೆಟ್ಟಿ ಅವರನ್ನು ನೋಡಿಕೊಂಡಿರಲು ಮನೆಯಲ್ಲಿ ಬಿಟ್ಟಿದ್ದರು. 5 ವರ್ಷಗಳಿಂದ ಇಲ್ಲಿದ್ದು, ವಿಟuಲ ಇತ್ತೀಚೆಗೆ ಕುಡಿತದ ಚಟ ಹೊಂದಿದ್ದರು. ಮದ್ಯಪಾನಕ್ಕೆ ಹಣ ನೀಡಿಲ್ಲ ಎಂದು ಮನೆ ಹತ್ತಿರದ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪ್ರಕರಣ ದಾಖಲಾಗಿದೆ.