ಕುಂದಾಪುರ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಕಾರು ಢಿಕ್ಕಿಯಾಗಿ ಗಾಯಗೊಂಡ ಘಟನೆ ಕುಂದಾಪುರದ ಶಾಸ್ತ್ರೀ ವೃತ್ತದ ಬಳಿಯ ಪೊಲೀಸ್ ಚೌಕಿ ಎದುರು ಮೇ 21ರಂದು ರಾತ್ರಿ ಸಂಭವಿಸಿದೆ.
ಕುಂದಾಪುರದ ನಿವಾಸಿ ಶಾಂತೇಶ (43) ಗಾಯಗೊಂಡವರು.
ಇವರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಚಲಾಯಿಸಿಕೊಂಡು ಬಂದ ಗುರುರಾಜ ಅವರ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಕಾಂತೇಶ ಅವರ ತಲೆಗೆ, ಕೈ-ಕಾಲುಗಳಿಗೆ ಗಾಯಗಳಾಗಿದ್ದು, ಕುಂದಾಪುರ ಸರಕಾರಿ ಆಸ್ಪತ್ರೆಗೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಂತೇಶ ಅವರ ಅಣ್ಣ ರತ್ನಾಕರ ಅವರು ನೀಡಿದ ದೂರಿನಂತೆ ಕಾರು ಚಾಲಕ ಗುರುರಾಜ ವಿರುದ್ಧ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಕೂಟರಿಗೆ ಕಾರು ಢಿಕ್ಕಿ; ಗಾಯ
ಕುಂದಾಪುರ: ಕುಂಭಾಶಿ ಸ್ವಾಗತ ಕಮಾನು ಬಳಿ ಅಶೋಕ ಜಿ. ಎನ್. (47) ಅವರು ಸ್ಕೂಟರ್‌ನಲ್ಲಿ ಸುಬ್ರಹ್ಮಣ್ಯ (44) ಅವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ ಕಾರು ಢಿಕ್ಕಿಯಾಗಿದೆ.
ಪರಿಣಾಮ ಇಬ್ಬರಿಗೂ ಗಾಯಗಳಾಗಿದ್ದು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.