Advertisement
ರಾತ್ರಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯದಲ್ಲಿರುವಾಗ ರಾಧಾ ಎಂಬವರು ಇನ್ನೋರ್ವ ಮಹಿಳೆ ಜತೆ ಚಿಕಿತ್ಸೆಗೆ ಬಂದಿದ್ದು, ಅವರನ್ನು ಶುಶ್ರೂಷಾಧಿಕಾರಿ ಶೋಭಾ ಕುಮಾರಿ ಅವರ ಸಮಕ್ಷಮದಲ್ಲಿ ಸಮಾಲೋಚನೆ ನಡೆಸಿ ವೈದ್ಯಕೀಯಾ ದಾಖಲೆಗಳನ್ನು ಪರಿಶೀಲಿಸಿ ಒಳರೋಗಿಯಾಗಿ ದಾಖಲಿಸಲು ಸೂಚಿಸಲಾಗಿತ್ತು. ಆಗ ಮಹಿಳೆಯ ಪತಿ ನಾಗರಾಜ ಬೀಜಾಡಿ ಬಂದಿದ್ದು ರಾಧಾ ಜತೆ ವೈದ್ಯರು ಶುಶ್ರೂಷಾಧಿಕಾರಿ ಸಮ್ಮುಖ ಸಮಾಲೋಚನೆ ನಡೆಸಿದಾಗ ಆಸ್ಪತ್ರೆಯಿಂದ ದಾಖಲಾಗದೇ ಹೊರಟು ಹೋಗಿದ್ದಾರೆ. ಮರಳಿ ಬಂದು ವೈದ್ಯರನ್ನು ನಿಂದಿಸಿ, ಹಲ್ಲೆ ಮಾಡಲು ಮುಂದಾಗಿದ್ದಲ್ಲದೆ ಮೇಜಿನ ಮೇಲಿದ್ದ ಸರಕಾರಿ ದಾಖಲೆಗಳನ್ನು ಹರಿದು ಎಸೆದು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ರಾಧಾ ಅವರ ವೈದ್ಯಕೀಯ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. Advertisement
Kundapura: ವೈದ್ಯರ ಮೇಲೆ ಹಲ್ಲೆಗೆ ಯತ್ನ; ಬೆದರಿಕೆ; ದೂರು ದಾಖಲು
08:47 PM Nov 05, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.