Advertisement

Kundapura: ಅರಣ್ಯ ದಳದ ಸಿಬಂದಿಗೆ ಹಲ್ಲೆ: ಮತ್ತೋರ್ವನ ಬಂಧನ

01:18 AM Dec 26, 2024 | Team Udayavani |

ಕುಂದಾಪುರ: ತಿಮಿಂಗಿಲದ ವಾಂತಿ (ಅಂಬರ್‌ ಗ್ರೀಸ್‌) ಮಾರಾಟ ಜಾಲದ ಶಂಕೆಯ ಹಿನ್ನೆಲೆಯಲ್ಲಿ ಕೋಡಿ ಸಮೀಪದ ಎಂಕೋಡಿಯ ಸೌಹಾರ್ದ ಭವನದಲ್ಲಿ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಸಂಚಾರಿ ದಳದ (ಫಾರೆಸ್ಟ್‌ ಸಿಐಡಿ) ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳ ಪೈಕಿ ಮತ್ತೋರ್ವನನ್ನು ಕುಂದಾಪುರ ಪೊಲೀಸರನ್ನು ಬಂಧಿಸಿದ್ದಾರೆ.

Advertisement

ಕೋಡಿಯ ಅಬ್ದುಲ್‌ ರೆಹೆಮಾನ್‌ ಯಾನೆ ಅದ್ದು ಬಂಧಿತ ಆರೋಪಿ. ಇದರೊಂದಿಗೆ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ ಐದಕ್ಕೇರಿದೆ.

ಇದಕ್ಕೂ ಮೊದಲು ಆರೋಪಿಗಳಾದ ಕೋಡಿ ನಿವಾಸಿಗಳಾದ ಅಬೂಬಕ್ಕರ್‌ (50), ಹಸೈನಾರ್‌ (57), ಉಬೈದುಲ್ಲಾ (40) ಹಾಗೂ ಬೈಂದೂರಿನ ಮಹಮ್ಮದ್‌ ಅಲಿ (50) ಯನ್ನು ಪೊಲೀಸರು ಬಂಧಿಸಿದ್ದರು. ಡಿ. 18 ರ ಮಧ್ಯಾಹ್ನ ಅರಣ್ಯ ಸಂಚಾರಿ ದಳದ ಮಂಗಳೂರಿನ ಎಸ್‌ಐ ಜಾನಕಿ ನೇತೃತ್ವದ ತಂಡವು ಅಂಬರ್‌ ಗ್ರೀಸ್‌ ಮಾರಾಟ ಶಂಕೆಯ ಹಿನ್ನೆಲೆಯಲ್ಲಿ ದಾಳಿ ನಡೆಸಿತ್ತು. ಈ ವೇಳೆ ಅಲ್ಲಿದ್ದ ಕೆಲವರು ಅಧಿಕಾರಿಗಳನ್ನೇ ಕಟ್ಟಿ ಹಾಕಿ, ಹಲ್ಲೆ ನಡೆಸಿದ್ದ ಘಟನೆ ನಡೆದಿತ್ತು. ಈ ಪೈಕಿ ಅಧಿಕಾರಿಗಳು ಹಾಗೂ ಜತೆಗೆ ಬಂದಿದ್ದ ಬಾತ್ಮಿದಾರರೂ ಗಾಯಗೊಂಡಿದ್ದರು. ಈ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next