ಕುಂದಾಪುರ: ದಾವಣಗೆರೆ ವಿನೋಬನಗರದ ಜಾಯ್ ಇ.ಪಿ. (61) ಅವರನ್ನು ಚಿಕಿತ್ಸೆಗೆ ಕರೆತರುತ್ತಿದ್ದಾಗ ಮೃತ ಪಟ್ಟಿದ್ದಾರೆ.
Advertisement
ಅವರಿಗೆ ಬಿಪಿ ಮತ್ತು ಶುಗರ್ ಕಾಯಿಲೆ ಇದ್ದು, ಚಿಕಿತ್ಸೆಗೆಂದು ಬಸ್ಸಿನಲ್ಲಿ ದಾವಣಗೆರೆಯಿಂದ ಮಣಿಪಾಲಕ್ಕೆ ಕರೆದುಕೊಂಡು ಬರುತ್ತಿದ್ದಾಗ ಕುಂದಾಪುರ ಸಮೀಪ ವಾಂತಿ ಪ್ರಾರಂಭವಾಗಿ ಅಸ್ವಸ್ಥರಾದರು. ಸರಕಾರಿ ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು, ಜಾಯ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.