ಕುಂದಾಪುರ: ಇಲ್ಲಿನ ಲಾಡ್ಜ್ ವೊಂದರಲ್ಲಿ ಶಿವಮೊಗ್ಗ ತಾಲೂಕಿನ ಶೆಟ್ಟಿಹಳ್ಳಿಯ ನಿವಾಸಿ ಸುನೀಲ್ ಕುಮಾರ್ (39) ಎಂಬುವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.20 ರಂದು ಬೆಳಕಿಗೆ ಬಂದಿದೆ.
ಸುನೀಲ್ ಕುಮಾರ್ ಅವರು ಜ.17 ಕ್ಕೆ ನಾಡಗುಡ್ಡೆಯಂಗಡಿಯ ವಾರ್ಷಿಕ ಹಬ್ಬಕ್ಕೆಂದು ಕುಂದಾಪುರಕ್ಕೆ ಬಂದಿದ್ದು, ಆ ದಿನ ಇಲ್ಲಿನ ಲಾಡ್ಜ್ ವೊಂದರಲ್ಲಿ ವಾಸ್ತವ್ಯ ಹೂಡಿದ್ದರು.
ಜ.20 ರಂದು ರೂಮ್‌ನ ಬಾಗಿಲು ತೆರೆಯದೇ ಅನುಮಾನಗೊಂಡು ಕಿಟಕಿ ಮೂಲಕ ನೋಡಿದಾಗ, ದುರ್ವಾಸನೆ ಬರುತ್ತಿತ್ತು. ವಿಪರೀತ ಕುಡಿತದ ಚಟ ಹೊಂದಿದ್ದ ಇವರು ಜ.17 ರಿಂದ ಜ.20 ರ ಮಧ್ಯದ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದು ಬಂದಿದೆ.
ಸಹೋದರ ಹೇಮಂತ್ ಕುಮಾರ್ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.