Advertisement
ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ತಂಗಿ ಗಿರಿಜಾ ಅವರು ಹೃದಯಾಘಾತದಿಂದ ಮನೆ ಯಲ್ಲಿಯೇ ಸಾವನ್ನಪ್ಪಿದ್ದು, ಅದೇ ಆಘಾತ ಹಾಗೂ ನೋವಿನಿಂದ ಸಂಜೆ 7 ಗಂಟೆಯ ಸುಮಾರಿಗೆ ಅವರ ಅಣ್ಣ ಸುಬ್ಬಣ್ಣ ಅವರು ಸಹ ಹೃದಯಾಘಾತದಿಂದ ಹಾಲಾಡಿಯಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರಿಬ್ಬರು ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದರೂ, ಅಕ್ಕ-ಪಕ್ಕದಲ್ಲೇ ಮನೆಯಿತ್ತು.
ಈ ಕುಟುಂಬ ಕಳೆದ ಹತ್ತು ವರ್ಷಗಳಲ್ಲಿ ಅನೇಕ ಸಾವುಗಳನ್ನು ಕಂಡಿದೆ. ಎಲ್ಲ ಸಾವುಗಳು ಆಕಸ್ಮಿಕ ಮರಣಗಳಾಗಿವೆ. ಗಿರಿಜಾ ಬಾೖ ಅವರ ಪತಿ ಆಕಸ್ಮಿಕವಾಗಿ ಮರಣ ಹೊಂದಿದ್ದರು. ಮಗ ವಸಂತ ಕೂಡ ಹೆಬ್ರಿ ಹತ್ತಿರ ಚಾರ ಹೊಳೆಯಲ್ಲಿ ಕಾಲು ಜಾರಿ ಮೃತಪಟ್ಟಿದ್ದರು. ಈಗ ಎಲ್ಲರನ್ನು ಕಳೆದುಕೊಂಡಿರುವ ಒಬ್ಬ ಮಗ ಅನಂತ ಅವರು ಏಕಾಂಗಿಯಾಗಿದ್ದಾರೆ. ಸುಬ್ಬಣ್ಣ ನಾಯ್ಕ ಅವರಿಗೆ ಮೂವರು ಪುತ್ರಿಯರು ಮತ್ತು ಇಬ್ಬರು ಪುತ್ರರು. ಪುತ್ರ ಸತೀಶ ಅವರು ಧರ್ಮಸ್ಥಳದಲ್ಲಿ
ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿದ್ದರು. ಸತೀಶ ಅವರಿಗೆ ಮದುವೆಯಾಗಿ ಮಗು ಕೂಡ ಇದೆ. ಸುಬ್ಬಣ್ಣ ನಾಯ್ಕ ಅವರ ಅಣ್ಣ ಮಲ್ಲು ನಾಯ್ಕ ಅವರು ಪ್ಯಾರೆಲಿಸ್‌ನಿಂದ ಕಳೆದ 3 ವರ್ಷದ ಹಿಂದೆ ಮೃತಪಟ್ಟಿದರು.