Advertisement
ದೇವಸ್ಥಾನಗಳಲ್ಲಿ ಮಾಸ್ಕ್ ಧರಿಸಿದ ಭಕ್ತರನ್ನು ಮಾತ್ರ ಒಳಬಿಡಲಾಗುತ್ತಿತ್ತು. ಪ್ರವೇಶಕ್ಕೆ ಮೊದಲು ಕೈ- ಕಾಲು ತೊಳೆದು, ಸ್ಯಾನಿಟೈಸರ್ ಹಾಕಿ ಸ್ವಚ್ಛ ಮಾಡಿ ಪ್ರವೇಶಿಸಬೇಕು. ದೇಹದ ಉಷ್ಣಾಂಶ ತಪಾಸಣೆ, ಸಾಮಾಜಿಕ ಅಂತರ, ಹಣ್ಣು, ಕಾಯಿ, ಇತ್ಯಾದಿ ಪೂಜಾ ಸಾಮಗ್ರಿಗಳನ್ನು ತೊಳೆದು ತರಬೇಕು ಎಂಬಿತ್ಯಾದಿ ನಿಬಂಧನೆಗಳನ್ನು ವಿಧಿಸಲಾಗಿತ್ತು.
Related Articles
ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೂ ಮುನ್ನ ಥರ್ಮಲ್ ಸ್ಕಾನ್, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಜತೆಗೆ ಸ್ಯಾನಿಟೈಸರ್ ಬಳಸಲಾಗಿತ್ತು.
Advertisement
ಬೆಳ್ಮಣ್ ಪರಿಸರದ ದೇಗುಲವಾದ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇಗುಲ ಸಹಿತ ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರೀ ದೇಗುಲ, ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇಗುಲ, ಬೋಳ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇಗುಲ, ಪೊಸ್ರಾಲು ಶ್ರೀ ಮಹಾಲಿಂಗೇಶ್ವರಗಳು ಸೋಮವಾರ ತೆರೆದಿದ್ದು ಭಕ್ತರ ಸಂಖ್ಯೆ ವಿರಳವಾಗಿತ್ತು. ಧಾರ್ಮಿಕ ದತ್ತಿ ಇಲಾಖೆ ನೀಡಿದ ಮಾರ್ಗಸೂಚಿಗಳನ್ನು ಅನುಸರಿಸಲು ಭಕ್ತರು ಒಂದಿಷ್ಟು ಪರದಾಡುವಂತಾಗಿತ್ತು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಶತ ಚಂಡಿಕಾಯಾಗ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಜೂ.8ರಂದು ಶ್ರೀ ದೇವಿಯ ದರ್ಶನಕ್ಕೆ ಪ್ರವೇಶ ದೊರಕಿದ್ದು, ದೇಗುಲದಲ್ಲಿ ಲೋಕ ಕಲ್ಯಾಣಾರ್ಥ ಚಂಡಿಕಾ ಯಾಗ ನಡೆಯಿತು. ಇಲ್ಲಿ ಒಳ ಪೌಳಿ ದರ್ಶನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಧ್ವಜಸ್ತಂಭದ ಬಳಿ ಬಂದ ಭಕ್ತರು ಪ್ರಾರ್ಥನೆ ಸಲ್ಲಿಸಿ ಸರಸ್ವತಿ ಮಂಟಪ ಮಾರ್ಗವಾಗಿ ಆನೆ ಬಾಗಿಲು ದ್ವಾರದಿಂದ ನಿರ್ಗಮಿಸಲು ವ್ಯವಸ್ಥೆಗೊಳಿಸಲಾಗಿದೆ. ದೇವರ ಹರಕೆ ಪೂಜೆ ಸೇವೆಗೆ ಅವಕಾಶವಿಲ್ಲ , ಗರ್ಭ ಗುಡಿಯ ಒಳ ಪೌಳಿಯಲ್ಲಿ ಪೂಜಾ ವಿಧಿವಿಧಾನ ನೆರವೇರಿಸುವ ಅರ್ಚಕರಿಗೆ ಪ್ರವೇಶ ಕಲ್ಪಿಸಲಾಗಿದೆ. ಸರಕಾರದ ಮುಂದಿನ ಆದೇಶದವರೆಗೆ ಮಧ್ಯಾಹ್ನ ಹಾಗೂ ರಾತ್ರಿಯ ಭೋಜನ ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ.