Advertisement

ಕುಂದಾಪುರ: ಅಪಘಾತದಲ್ಲಿ ಶಾಲಾ ಶಿಕ್ಷಕಿ ಸಾವು; ಕಂಬನಿ ಮಿಡಿದ ವಿದ್ಯಾರ್ಥಿಗಳು

06:59 PM Aug 12, 2022 | Team Udayavani |

ಕುಂದಾಪುರ: ಬೈಕ್‌ ಪಲ್ಟಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಮ್ಮಾಡಿ ಸರಕಾರಿ ಹಿ.ಪ್ರಾ. ಶಾಲೆಯ ಶಿಕ್ಷಕಿ, ಮುದೂರು ಸೆಳ್ಕೋಡು ನಿವಾಸಿ ಅಂಬಿಕಾ (32) ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

Advertisement

ವಂಡ್ಸೆ ಸಮೀಪ ಗುರುವಾರ ಶಿಕ್ಷಕಿ ಅಂಬಿಕಾ ಅವರು ಪತಿ ಶ್ರೀಕಾಂತ್‌ ಅವರೊಂದಿಗೆ ಶಾಲೆಗೆ ಬೈಕಿನಲ್ಲಿ ಹೊರಟಿದ್ದು, ವಂಡ್ಸೆ ಸಮೀಪ ದನ ಅಡ್ಡ ಬಂದ ಪರಿಣಾಮ ಬೈಕ್‌ ಪಲ್ಟಿಯಾಗಿ ಇಬ್ಬರೂ ಕೆಳಕ್ಕೆ ಬಿದ್ದಿದ್ದರು. ಶ್ರೀಕಾಂತ್‌ಗೆ ಸಣ್ಣಪುಟ್ಟ ಗಾಯವಾದರೆ, ಸಹ ಸವಾರೆ ಅಂಬಿಕಾ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ರಾತ್ರಿ ವೇಳೆ ಸಾವನ್ನಪ್ಪಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಲೆಯಲ್ಲಿ ಗೌರವ

ಶುಕ್ರವಾರ ನೆಚ್ಚಿನ ಶಿಕ್ಷಕಿಯ ಮೃತದೇಹವನ್ನು ಶಾಲೆಗೆ ತಂದಾಗ ವಿದ್ಯಾರ್ಥಿಗಳು, ಊರವರೆಲ್ಲ ಭಾವುಕರಾಗಿ ಕಣ್ಣೀರಿಟ್ಟರು. ಅಗಲಿದ ಶಿಕ್ಷಕಿಗೆ ಶಾಲೆಯ ಆವರಣದಲ್ಲಿ ಅಂತಿಮ ಗೌರವ ಸಲ್ಲಿಸಲಾಯಿತು. ಮೃತರ ಗೌರವಾರ್ಥ ಶಾಲೆಗೆ ರಜೆ ನೀಡಲಾಗಿತ್ತು. ಮೃತ ಶಿಕ್ಷಕಿ ಅಂಬಿಕಾ ಅವರು ಪತಿ, ನಾವುಂದ ಶಾಲೆಯ ಶಿಕ್ಷಕ ಶ್ರೀಕಾಂತ್‌ ಹಾಗೂ ಒಂದೂವರೆ ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾರೆ.

ಇದನ್ನೂ ಓದಿ: ವಿಟ್ಲ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

Advertisement

ಅಂಬಿಕಾ ಅವರು 2018ರಲ್ಲಿ ಹೆಮ್ಮಾಡಿ ಶಾಲೆಗೆ ಸೇರಿದ್ದು, ಅದಕ್ಕೂ ಮೊದಲು ಕಮಲಶಿಲೆ ಪ್ರೌಢಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಆ ನಾಲ್ಕು ವರ್ಷವೂ ಶಾಲೆಗೆ ಶೇ.100 ಫಲಿತಾಂಶ ಬಂದಿತ್ತು. ಈ ಕಾರಣಕ್ಕಾಗಿ ಅವರಿಗೆ ಅಂದು ಶಾಲಾ ಸಮಿತಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪ್ರಶಸ್ತಿ ನೀಡಿತ್ತು.

ಈ ವೇಳೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬೈಂದೂರು ಬಿಇಒ ನಾಗೇಶ್‌ ನಾಯ್ಕ, ಜಿ.ಪಂ. ಮಾಜಿ ಅಧ್ಯಕ್ಷ ಎಸ್‌.ರಾಜು ಪೂಜಾರಿ, ಮಾಜಿ ಸದಸ್ಯೆ ಶೋಭಾ ಜಿ. ಪುತ್ರನ್‌, ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷ ಸುಧಾಕರ ದೇವಾಡಿಗ, ಸದಸ್ಯರಾದ ಯು. ಸತ್ಯನಾರಾಯಣ ರಾವ್‌, ರಾಘವೇಂದ್ರ ಪೂಜಾರಿ ಎಚ್‌., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್‌ ಭಂಡಾರಿ, ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ, ಮುಖ್ಯ ಶಿಕ್ಷಕ ದಿವಾಕರ, ಎಪಿಎಂಸಿ ಮಾಜಿ ಅಧ್ಯಕ್ಷ ಶರತ ಕುಮಾರ್‌ ಶೆಟ್ಟಿ ಬಾಳಿಕೆರೆ, ಕಟ್‌ಬೆಲ್ತೂರು ಗ್ರಾ.ಪಂ. ಅಧ್ಯಕ್ಷ ನಾಗರಾಜ್‌ ಪುತ್ರನ್‌, ತಾ| ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರ ಶೇಖರ ಶೆಟ್ಟಿ, ಸಮನ್ವಯಾಧಿಕಾರಿ ಕರುಣಾಕರ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಶೇಖರ ಪೂಜಾರಿ ಅಂತಿಮ ನಮನ ಸಲ್ಲಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next