ಕುಂದಾಪುರ: ರಿಕ್ಷಾಕ್ಕೆ ಪಿಕಪ್ ವಾಹನ ಢಿಕ್ಕಿಯಾಗಿ ಐವರು ಗಾಯಗೊಂಡ ಘಟನೆ ಶನಿವಾರ ಸಂಜೆ ರಾ.ಹೆ. 66ರ ಹೆಮ್ಮಾಡಿ ಸಮೀ ಪದ ಮೂವತ್ತುಮುಡಿ ಎಂಬಲ್ಲಿ ಸಂಭವಿಸಿದೆ.
ರಿಕ್ಷಾ ಚಾಲಕ ನಾರಾಯಣ, ಪ್ರಯಾಣಿಕರಾದ ಕುಸುಮಾ(48) ಅವರು ಗಂಭೀರ ಗಾಯಗೊಂಡಿದ್ದು, ಚಂದ್ರಶೇಖರ್ (53), ಚಿರಾಗ್ (17), ಜಾನ್ವಿ (15)ಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಿಂದಾಗಿ ರಿಕ್ಷಾ ಡಿವೈಡರ್ ಏರಿದ್ದು, ಪಿಕಪ್ ವಾಹನ ರಸ್ತೆಯಿಂದ ಕೆಳಗಿಳಿದು ಹೊಳೆಯಂಚಿನಲ್ಲಿ ನಿಂತಿದೆ. ರಿಕ್ಷಾ ಹಾಗೂ ಪಿಕಪ್ ಎರಡೂ ಬೈಂದೂರಿನಿಂದ ಕುಂದಾಪುರ ಕಡೆಗೆ ಸಂಚರಿಸುತ್ತಿದ್ದವು.
ಕುಂದಾಪುರ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪಿಕಪ್ ಚಾಲಕ ದರ್ಶನ್ ವಿರುದ್ಧ ಪ್ರಕರಣ ದಾಖಲಾಗಿದೆೆ.