Advertisement

Kundapura ಲೈಂಗಿಕ ದೌರ್ಜನ್ಯವೆಸಗಿದ ವೈದ್ಯಾಧಿಕಾರಿ ವಜಾ

12:44 AM Jun 01, 2024 | Team Udayavani |

ಕುಂದಾಪುರ: ಇಲ್ಲಿನ ಸರಕಾರಿ ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ| ರಾಬರ್ಟ್‌ ರೆಬೆಲ್ಲೋ ವಿರುದ್ಧ ವೈದ್ಯೆಗೆ ಮಾನಸಿಕ, ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ ಕುರಿತು ಪ್ರಕರಣ ದಾಖಲಾಗಿದೆ.

Advertisement

ಕರ್ತವ್ಯಕ್ಕೆ ಹೊಸದಾಗಿ ಸೇರಿದ ವೈದ್ಯೆಗೆ ಕಳೆದ 8 ತಿಂಗಳಿನಿಂದ ವಾಟ್ಸಾಪ್‌ನಲ್ಲಿ ತಡರಾತ್ರಿ ನಿರಂತರ ಅಶ್ಲೀಲ ಚಾಟ್‌ಗಳನ್ನು ಮಾಡುತ್ತಾ, ಸ್ಟೇಟಸ್‌ನ ಫೋಟೊಗಳನ್ನು ಸೇವ್‌ ಮಾಡಿ ಅದಕ್ಕೆ ಅಶ್ಲೀಲ ಕಮೆಂಟ್‌ಗಳನ್ನು ಕಳುಹಿಸಿ, ದುಬಾರಿ ಹೊಟೇಲ್‌ಗೆ ಕರೆದೊಯ್ಯುತ್ತೇನೆ ಎಂದು ಕರೆಯುತ್ತಿದ್ದರು. ಪ್ರಭಾವಿಗಳ ಜತೆ, ರಾಜಕಾರಣಿಗಳ ಜತೆ ಇರುವ ಫೋಟೊಗಳನ್ನು, ವಿದೇಶದಲ್ಲಿ ಹೊಟೇಲ್‌ನಲ್ಲಿ ಬೇರೆ ಹೆಣ್ಣು ಮಕ್ಕಳೊಂದಿಗೆ ವಾಸ್ತವ್ಯ ಹೂಡಿದ ಫೋಟೊಗಳನ್ನು ಕಳುಹಿಸಿ ನೀನು ಬಾ ಎನ್ನುತ್ತಿದ್ದರು.

ಉದ್ಯೋಗ ಉಳಿಸಿಕೊಳ್ಳುವ ಸಲುವಾಗಿ ವೈದ್ಯೆ ಮಾನಕ್ಕೆ ಹೆದರಿ ಸುಮ್ಮನಿದ್ದರೂ, ಅವರ ಮೇಲೆ ಬೇರೆ ವೈದ್ಯರು, ಸಿಬಂದಿ ಜತೆ ಸಂಭಾಷಣೆ ನಡೆಸಿದ್ದಕ್ಕೆ ಕೆಟ್ಟಪದ ಪ್ರಯೋಗ ಮಾಡಿ ಸುಳ್ಳು ಅಪವಾದ ಹೇರಿ ತಲೆಗೆ ಕಟ್ಟಿದ್ದಾರೆ ಎಂದು ದೂರಲಾಗಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸ್‌ ಅಧಿಕಾರಿಗಳು ಹಾಗೂ ತಹಶೀಲ್ದಾರ್‌ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.

ಕರ್ತವ್ಯ ದಿಂದ ಬಿಡುಗಡೆ
ಡಾ| ರಾಬರ್ಟ್‌ ರೆಬೆಲ್ಲೋ ಮೇಲೆ ಸಾರ್ವಜನಿಕರಿಂದ ಹಾಗೂ ಸಹ ಸಿಬಂದಿ, ವೈದ್ಯರಿಂದ ದೂರು ಬಂದ ಹಿನ್ನೆಲೆಯಲ್ಲಿ ನಡೆದ ತನಿಖೆ ಆಧಾರದಲ್ಲಿ ಹಾಗೂ ಲೈಂಗಿಕ ದೌರ್ಜನ್ಯ ಕೇಸು ದಾಖಲಾದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ಡಿಸಿ ಡಾ| ವಿದ್ಯಾ ಕುಮಾರಿ ಆದೇಶ ಹೊರಡಿಸಿದ್ದಾರೆ. ಕುಂದಾಪುರ ಆಸ್ಪತ್ರೆಗೆ ಡಾ| ಲತಾ ಅವರನ್ನು ವೈದ್ಯಾಧಿಕಾರಿಯಾಗಿ ನೇಮಿಸಿ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next