Advertisement
ಮೋಡಕವಿದ ವಾತಾವರಣ ಮುಂದುವರಿದು ಮಧ್ಯಾಹ್ನ ಮತ್ತೆ ತಾಸುಗಟ್ಟಲೆ ಮಳೆಯಾಯಿತು. ನಗರದ ರಸ್ತೆಗಳ ಹೊಂಡಗಳು ತುಂಬಿದ್ದಷ್ಟೇ ಅಲ್ಲ ಇದರಲ್ಲಿ ವಾಹನಗಳ ಓಡಾಟದ ಮೂಲಕ ಪಾದಚಾರಿಗಳ ಬಟ್ಟೆ ಕೆಂಪಾಗುವಂತೆ ಮಾಡಿತು.
Related Articles
ಸಿದ್ದಾಪುರ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಿದ್ದಾಪುರ ಪರಿಸರದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪರಿಣಾಮ ಜನ ಜೀವನದ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಆಹಾರ ಧಾನ್ಯಗಳು ಮಳೆಯಿಂದ ಕೊಳೆಯುತ್ತಿದ್ದು, ಅಪಾರ ನಷ್ಟ ಉಂಟಾಗಿದೆ.
ಹಲಾವಾರು ದಿನಗಳಿಂದ ಸಿದ್ದಾಪುರ ಪರಿಸರದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದೆ. ಈಗಾಗಲೇ ಸಿಡಿಲಿಗೆ ಉಳ್ಳೂರು-74ರಲ್ಲಿ ನಾಲ್ಕು ಮನೆಗಳು ಹಾಗೂ ಹಾಲಾಡಿಯಲ್ಲಿ ಎರಡು ಮನೆಗಳು ಜಖಂಗೊಂಡಿವೆ. ಅಂಪಾರು ಗ್ರಾಮದ ಶಾನ್ಕಟ್ಟು ಬಳಿ ಪಂಚಾಯತ್ ರಸ್ತೆ ಸಿಡಿಲಿಗೆ ಹಾನಿಗೊಂಡಿದೆ. ಅನೇಕ ಮನೆಗಳಲ್ಲಿ ವಿದ್ಯುತ್ ಉಪಕರಣಗಳು, ಬಟ್ಟೆ ಬರೆ ಹಾಗೂ ಆಹಾರ ಪದಾರ್ಥಗಳು ಸುಟ್ಟುಹೋಗಿವೆ.
Advertisement
ಸಿದ್ದಾಪುರ ಮಾತ್ರವಲ್ಲದೆ ಶಂಕರನಾರಾಯಣ, ಹಾಲಾಡಿ, ಬೆಳ್ವೆ, ಮಡಾಮಕ್ಕಿ, ಹೆಂಗವಳ್ಳಿ, ಅಮಾಸೆಬೈಲು, ಹೊಸಂಗಡಿ, ಹಳ್ಳಿಹೊಳೆ, ಆಜ್ರಿ, ಅಂಪಾರು ಮುಂತಾದ ಪ್ರದೇಶಗಳಲ್ಲಿ ಬುಧವಾರ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಅಲ್ಲಲ್ಲಿ ಸಣ್ಣಪುಟ್ಟ ಹಾನಿ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಅಡಿಕೆಗೆ ಕೊಳೆ ರೋಗ ಬಂದು ಅಡಿಕೆ ಉದುರುತ್ತಿವೆ.
ಮರಗಳು ಹಾನಿಗೊಂಡಿವೆ. ಅಲ್ಲಲ್ಲಿ ಬೆಳೆದಿರುವ ಭತ್ತದ ಗದ್ದೆಯನ್ನು ಕಟಾವು ಮಾಡಲು ಮಳೆ ಅಡ್ಡಿಪಡಿಸುತ್ತಿದ್ದು, ಪೈರುಗಳು ಓಣಗಿ ಗದ್ದೆಯಲ್ಲಿ ಭಾಗಿಕೊಂಡಿವೆ.
ಸಿದ್ದಾಪುರ ಮಾರ್ಕೆಟ್ ಕೆಸರುಮಯಕುಂದಾಪುರ ತಾಲೂಕಿನಲ್ಲಿ ಎರಡನೇ ಅತೀ ದೊಡ್ಡ ಸಂತೆಯಾಗಿರುವ ಸಿದ್ದಾಪುರ ಸಂತೆ ಮಾರ್ಕೆಟ್ ಮಳೆಯಿಂದಾಗಿ ಕೆಸರು ಮಯವಾಗಿದೆ. ಸಂತೆ ಒಂದರಿಂದಲೇ ಗ್ರಾಮ ಪಂಚಾಯತ್‌ಗೆ ವಾರ್ಷಿಕ 2.75 ಲಕ್ಷ ರೂ. ಆದಾಯ ಇದ್ದರೂ ನಿರ್ವಹಣೆ ಇಲ್ಲದೆ, ವ್ಯಾಪಾರಸ್ಥರು ಕೊಳಚೆ ಮೇಲೆಯೇ ವ್ಯಾಪಾರ ಮಾಡುವಂತಾಗಿದೆ. ಉಪ್ಪುಂದ, ಮರವಂತೆ ಭಾರೀ ಮಳೆ
ಉಪ್ಪುಂದ: ಬೈಂದೂರು, ಉಪ್ಪುಂದ, ಮರವಂತೆ ಪ್ರದೇಶಗಳಲ್ಲಿ ಅ. 23ರಂದು ದಿನವಿಡೀ ಭಾರೀ ಮಳೆ ಸುರಿದಿದೆ. ಬೈಂದೂರು, ನಾವುಂದ, ಮರವಂತೆ ಪ್ರದೇಶದಲ್ಲಿ ಮಂಗಳವಾರ ರಾತ್ರಿಯಿಂದ ಮಳೆಯಾಗಿದೆ. ಬುಧುವಾರ ಕೂಡಾ ಮಳೆ ಮುಂದುವರಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ರಾ.ಹೆದ್ದಾರಿಯ ಬದಿಯಲ್ಲಿ ಮಳೆ ನೀರು ನಿಂತುಕೊಂಡಿದ್ದು ದೊಡ್ಡ ವಾಹನಗಳು ಸಾಗುವಾಗ ರಸ್ತೆ ಮೇಲಿನ ಮಳೆ ನೀರು ಪಾದಚಾರಿಗಳ ಹಾಗೂ ಬೈಕ್ ಸವಾರರಿಗೆ ಎರಚುತ್ತಿದೆ. ವಾಹನಗಳ ಸಂಚಾರದಲ್ಲಿ ಅಡಚಣೆ ಉಂಟಾಯಿತು. ಉಪ್ಪುಂದ ಸರ್ವಿಸ್ ರಸ್ತೆ ಹಾಗೂ ಬಿಜೂರು ಪ್ರೌಢ ಶಾಲೆಗೆ ಹೋಗುವ ರಸ್ತೆಯಲ್ಲಿ ಮಳೆ ನೀರು ನಿಂತುಕೊಂಡು ಸಾರ್ವಜನಿಕರು, ವಾಹನ ಸವಾರರು ಸಮಸ್ಯೆ ಎದುರಿಸುವಂತಾಯಿತು. ದಿನವಿಡೀ ಸುರಿಯುತ್ತಿರು ಮಳೆ ಯಿಂದಾಗಿ ಭತ್ತ ಬೆಳೆಯ ಕಟಾವಿನ ತಯಾರಿಯಲ್ಲಿದ್ದ ರೈತರಿಗೆ ತೀವ್ರ ತೊಂದರೆಯಾಗುತ್ತಿರುವುದು ಕಂಡು ಬಂದಿದೆ. ಇದರಿಂದಾಗಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಯಡ್ತರೆ, ಬಿಜೂರು, ನಾಯ್ಕನಕಟ್ಟೆ, ಕಂಬದಕೋಣೆ, ನಾಗೂರು, ಉಪ್ರಳ್ಳಿ, ಕಿರಿಮಂಜೇಶ್ವರ, ಅರೆಹೊಳೆ, ನಾವುಂದ ಪರಿಸರದಲ್ಲಿ ಮಳೆಯಾಗಿದೆ.