Advertisement

ಕುಂದಾಪುರ-ಗೋವಾ ಹೆದ್ದಾರಿ ಶೀಘ್ರ ಸಿದ್ಧ: ಕೇಂದ್ರ ಸಚಿವ ಗಡ್ಕರಿ 

01:15 AM Jul 03, 2022 | Team Udayavani |

ಹೊಸದಿಲ್ಲಿ: ಕರ್ನಾಟಕ – ಗೋವಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ನ್ನು ಚತುಷ್ಪಥ ಹೆದ್ದಾರಿಯಾಗಿ ಪರಿವರ್ತಿಸುವ ಕಾರ್ಯ ಭರದಿಂದ ಸಾಗಿದ್ದು, ಕರ್ನಾಟಕ - ಗೋವಾ ಗಡಿಯಿಂದ ಕುಂದಾಪುರದವರೆಗಿನ ಕಾಮಗಾರಿ ಮುಕ್ತಾ­ಯದ ಹಂತ ತಲುಪಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

Advertisement

ಈ ಕುರಿತಂತೆ ಫೇಸ್‌ಬುಕ್‌ನಲ್ಲಿ ಫೋಟೋ ಸಹಿತ ವಿವರಣೆ ನೀಡಿರುವ ಅವರು, “ಹೆದ್ದಾರಿಯ ಒಂದು ಬದಿಯಲ್ಲಿ ಪಶ್ಚಿಮ ಘಟ್ಟಗಳ ಸೌಂದರ್ಯ ಮತ್ತೊಂದು ಬದಿಯಲ್ಲಿ ಮನಮೋಹಕ ಅರಬಿ ಸಮುದ್ರವಿದೆ. ಇದರ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಕರ್ನಾಟಕ-ಗೋವಾ ಗಡಿಯಿಂದ ಕುಂದಾಪುರದವರೆಗಿನ ರಸ್ತೆಯ ಮೇಲ್ದರ್ಜೆಯ ಕಾಮಗಾರಿ ಬಹುತೇಕ ಮುಕ್ತಾಯದ ಹಂತ ತಲುಪಿದೆ.

187 ಕಿ.ಮೀ. ದೂರದ ಈ ಹೆದ್ದಾರಿಯ ಚತುಷ್ಪಥ ಕಾಮಗಾರಿ ಪೂರ್ಣಗೊಂಡ ಅನಂತರ ಪಶ್ಚಿಮ ಭಾರತ ಹಾಗೂ ದಕ್ಷಿಣ ಭಾರತವನ್ನು ಬೆಸೆ ಯುವ ಪ್ರಮುಖ ಸಂಪರ್ಕಕೊಂಡಿಯಾಗಲಿದೆ’ ಎಂದು ಬಣ್ಣಿಸಿದ್ದಾರೆ. ಈ ಹೆದ್ದಾರಿಯಲ್ಲಿ 45 ಕಿ.ಮೀ. ಸಣ್ಣಪುಟ್ಟ ದಿನ್ನೆಗಳನ್ನು ಹತ್ತಿಳಿಯುವಂಥ ಮಾರ್ಗಗಳಲ್ಲಿ ಸಾಗಿದರೆ, 24 ಕಿ.ಮೀ. ದೂರದ ಹೆದ್ದಾರಿಯು ಪರ್ವತವನ್ನು ಕೊರೆದು ಮಾಡಲಾಗಿರುವ ದಾರಿ­ಯಲ್ಲಿ ಸಾಗುತ್ತದೆ. ಈ ಇಡೀ ಯೋಜನೆಯು ಡಿಸೆಂಬರ್‌ನೊಳಗೆ ಪೂರ್ಣಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಹಲವು ನಗರಗಳಿಗೆ ಸಂಪರ್ಕ: ಈ ಹೆದ್ದಾರಿ ಮೇಲ್ದ­ರ್ಜೆಗೇರಿದ ಅನಂತರ ಕನ್ಯಾಕುಮಾರಿ, ತಿರುವನಂತಪುರ, ಕೊಚ್ಚಿ, ಕೋಯಿಕ್ಕೋಡ್‌, ಮಂಗಳೂರು, ಸುರತ್ಕಲ್‌, ಉಡುಪಿ, ಕಾರವಾರ, ಮಾರ್ಗೋವಾ, ಪಣಜಿ, ರತ್ನಾಗಿರಿ, , ಪನ್ವೆಲ್‌ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ವಿಶ್ವದರ್ಜೆಯ ಅನುಭವ
ಈ ರಸ್ತೆಯಲ್ಲಿ ಪ್ರಯಾಣಿಸುವ ಪಯಣಿ­ ಗರಿಗೆ ವಿಶ್ವ ದರ್ಜೆಯ ಸಾರಿಗೆ ಅನುಭೂತಿ ಉಂಟಾಗಲಿದೆ ಎಂದು ಗಡ್ಕರಿ ಭರವಸೆ ನೀಡಿದ್ದಾರೆ. ಈ ಹೆದ್ದಾರಿಯನ್ನು ವಾಣಿಜ್ಯ ಹಾಗೂ ಕೈಗಾರಿಕ ಸ್ನೇಹಿಯನ್ನಾಗಿಯೂ ರೂಪಿಸಲಾಗಿದೆ. ಅದರಿಂದ ಹೆದ್ದಾರಿಗೆ ಸಮೀಪದಲ್ಲಿರುವ ನಗರಗಳು, ಊರುಗಳ ಯುವ ಜನತೆಗೆ ನೇರ ಹಾಗೂ ಪರೋಕ್ಷ ಉದ್ಯೋಗಗಳು ಲಭಿಸುತ್ತವೆ ಎಂದು ಸಚಿವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next