Advertisement

ಸೂರ್ಗೋಳಿ ಗರಿಷ್ಠ, ಹಂಗಾರಕಟ್ಟೆ ಕನಿಷ್ಠ

08:35 PM Apr 19, 2019 | Sriram |

ಕುಂದಾಪುರ: ಉಡುಪಿ – ಚಿಕ್ಕಮಗಳೂರು ಲೋಕಸಭೆಗೆ ಎ. 18 ರಂದು ನಡೆದ ಚುನಾವಣೆಯಲ್ಲಿ ಕುಂದಾಪುರ ವಿಧಾನಸಭಾಕ್ಷೇತ್ರದ 222 ಮತಗಟ್ಟೆಗಳ ಪೈಕಿ ಸೂರ್ಗೋಳಿಯಲ್ಲಿ ಗರಿಷ್ಠ ಶೇ.89.38 ಹಾಗೂ ಹಂಗಾರ ಕಟ್ಟೆಯ (ಪೂರ್ವಭಾಗ) ಮತಗಟ್ಟೆಯಲ್ಲಿ ಕನಿಷ್ಠ ಶೇ. 65.36 ಮತದಾನವಾಗಿದೆ.

Advertisement

ಒಟ್ಟಾರೆ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,03,277 ಮತದಾ ರರ ಪೈಕಿ 1,57,863 ಮಂದಿ ಮತ ಚಲಾಯಿಸಿದ್ದು, ಒಟ್ಟು ಶೇ. 77.66 ಪ್ರತಿಶತ ಮತದಾನವಾಗಿದೆ. 2018ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಶೇ. 79 ಮತದಾನ ಆಗಿದ್ದರೆ, 2014 ರ ಲೋಕಸಭಾ ಚುನಾವಣೆಯಲ್ಲಿ ಶೇ. 76.31 ಪ್ರತಿಶತ ಮತ ಚಲಾವಣೆ ಯಾಗಿತ್ತು.

ಶೇ. 1.35 ಮತದಾನ ಹೆಚ್ಚಳ
ಕಳೆದ 2014 ಲೋಕಸಭೆ ಚುನಾವಣೆಗಿಂತ ಈ ಬಾರಿಯ ಚುನಾವಣೆಯಲ್ಲಿ ಶೇ. 1.35 ಪ್ರತಿಶತ ಮತದಾನ ಹೆಚ್ಚಳ ವಾಗಿದೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರದಲ್ಲಿ ಶೇ. 79 ರಷ್ಟು ಮತದಾನವಾಗಿತ್ತು. ಅಂದರೆ ಈ ಚುನಾವಣೆಯಲ್ಲಿ ಶೇ. 1.34 ರಷ್ಟು ಮತದಾನದ ಪ್ರಮಾಣ ಕಡಿಮೆಯಾಗಿದೆ.

ಮಹಿಳೆಯರೇ ಮುಂದು..!
ಪ್ರತಿ ಬಾರಿಯಂತೆ ಈ ಬಾರಿಯೂ ಮತ ಚಲಾಯಿಸಿದವರಲ್ಲಿ ಮಹಿಳೆ ಯರೇ ಮುಂದಿದ್ದಾರೆ. ಒಟ್ಟು ಇರುವ 1,05,585 ಮತದಾರರಲ್ಲಿ 83,743 ಮಂದಿ (ಶೇ. 79.31) ಮತ ಚಲಾಯಿಸಿದ್ದಾರೆ. 97,692 ಪುರುಷ ಮತದಾರರ ಪೈಕಿ 74,119 ಮಂದಿ (ಶೇ.75.87) ಮತ ಚಲಾಯಿಸಿದ್ದಾರೆ.

ಗರಿಷ್ಠ ಮತದಾನವಾದ 5 ಮತಗಟ್ಟೆ
ಸೂರ್ಗೋಳಿ ಸ.ಹಿ. ಪ್ರಾ. ಶಾಲೆ 89.38 ಶೇ.
ಬಳ್ಕೂರು ಹಿ.ಪ್ರಾ. ಶಾಲೆ (ಉತ್ತರ) 89.25
ತೆಕ್ಕಟ್ಟೆ ಕುವೆಂಪು ಮಾ. ಹಿ. ಪ್ರಾ. ಶಾಲೆ (ಪೂರ್ವ) 86.83
ಜಡ್ಡಿನಗದ್ದೆ ಹಿ.ಪ್ರಾ. ಶಾಲೆ 86.04
ಗಿಳಿಯಾರು ವಿದ್ಯಾದಾಯಿನಿ ಅ. ಹಿ.ಪ್ರಾ. ಶಾಲೆ (ಉತ್ತರ) 85.55

Advertisement

ಕನಿಷ್ಠ ಮತದಾನವಾದ 5 ಮತಗಟ್ಟೆಗಳು
ಹಂಗಾರಕಟ್ಟೆ ಮಾ. ಹಿ.ಪ್ರಾ. ಶಾಲೆ (ಪೂರ್ವ) 65.36 ಶೇ.
ಬೀಜಾಡಿ ಮೂಡು ಹಿ.ಪ್ರಾ. ಶಾಲೆ (ಉತ್ತರ) 66.71
ಮರತ್ತೂರು ಕಿ. ಪ್ರಾ. ಶಾಲೆ 67.03
ನಡೂರು ಹಿ. ಪ್ರಾ. ಶಾಲೆ (ದಕ್ಷಿಣ) 67.89
ಬಡಬೆಟ್ಟು ಬೇಳೂರು ಮಾ. ಹಿ. ಪ್ರಾ. ಶಾಲೆ (ಪೂರ್ವ) 67.98

Advertisement

Udayavani is now on Telegram. Click here to join our channel and stay updated with the latest news.

Next