Advertisement

ಕುಂದಗೋಳ: 6 ಕೈ ಬಂಡಾಯ ಅಭ್ಯರ್ಥಿಗಳ ಮನವೊಲಿಸಿದ ಜಮೀರ್‌

10:02 AM May 03, 2019 | Team Udayavani |

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಉಪ ಚುನಾವಣೆ ಟಿಕೆಟ್‌ ಕೈ
ತಪ್ಪಿದ್ದರಿಂದ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ 6 ಮಂದಿ ಮುಖಂಡರ ನಾಮಪತ್ರ ತೆಗೆಸುವಲ್ಲಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಯಶಸ್ವಿಯಾಗಿದ್ದಾರೆ.

Advertisement

ಬುಧವಾರ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿ ಮನವೊಲಿಸಿದ್ದ ಜಮೀರ್‌ ಅಹ್ಮದ್‌ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ವಿನಯ್‌ ಕುಲಕರ್ಣಿ 6 ಮಂದಿಯ ನಾಮಪತ್ರ ವಾಪಾಸ್‌ ತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ವತಃ ಜಮೀರ್‌ ಅವರೇ ತಾಲೂಕು ಕಚೇರಿಗೆ 6 ಮಂದಿಯೊಂದಿಗೆ ಆಗಮಿಸಿ ನಾಮಪತ್ರಗಳನ್ನ ವಾಪಾಸ್‌ ತೆಗೆಸಿದ್ದಾರೆ.

ಸುರೇಶ್‌ ಸವಣೂರು, ನದಾಫ್ , ಜೆ.ಡಿ ಘೋರ್ಪಡೆ,ಚಂದ್ರಶೇಖರ್‌, ವಿಶ್ವನಾಥ ಕುಬಿನಾಳ ಸೇರಿ ಆರು ಮಂದಿ ನಾಮಪತ್ರ ವಾಪಾಸ್‌ ಪಡೆದಿದ್ದಾರೆ.

ನಾಮಪತ್ರ ಹಿಂಪಡೆಯಲು ಮೇ 2 ಅಂತಿಮ
ದಿನವಾದ್ದರಿಂದ ಜಮೀರ್‌ ಬಂಡಾಯ ಶಮನಗೊಳಿಸಲು ನೇತೃತ್ವವಹಿಸಿದ್ದರು.

Advertisement

ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡುವುದಾಗಿ ಭರವಸೆ ನೀಡಿದಕಾರಣ ನಾಮಪತ್ರ ವಾಪಾಸ್‌ ಪಡೆದಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿರುವ ದಿ| ಸಿ.ಎಸ್‌. ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಮತ್ತು ಬಿಜೆಪಿಯ ಮಾಜಿ ಶಾಸಕಎಸ್‌.ಐ.ಚಿಕ್ಕನಗೌಡ್ರ ನಡುವೆ ನೇರ ಸ್ಪರ್ಧೆ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next