Advertisement

ಕುಂಚಿಟಿಗ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕು: ನಂಜಾವಧೂತ ಸ್ವಾಮೀಜಿ

06:35 PM Jan 26, 2023 | Team Udayavani |

ಕೊರಟಗೆರೆ ; ರಾಜ್ಯದಲ್ಲಿ ಅತಿದೊಡ್ಡ ಸಮುದಾಯವಾಗಿರುವ ಒಕ್ಕಲಿಗ ಮತ್ತು ವೀರಶೈವ ಸಮಾಜಗಳನ್ನು ಉಪ ಪಂಗಡಗಳಾಗಿ ಒಡೆಯದಂತೆ ಮತ್ತು ಕುಂಚಿಟಿಗ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಹಾಗೂ ಬಲಿಜ ಸಮುದಾಯಕ್ಕೆ 2 ಎ ಮೀಸಲಾತಿ ಹಿಂತಿರುಗಿಸುವಂತೆ ಪಟ್ಟನಾಯ್ಕನಹಳ್ಳಿ ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದ್ದಾರೆ.

Advertisement

ಕೋಳಾಲ ಹೋಬಳಿಯ ಚಿಕ್ಕಪಾಲನಹಳ್ಳಿ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಒಕ್ಕಲಿಗ ಮತ್ತು ವೀರಶೈವ ಜನಾಂಗಗಳು ದೊಡ್ಡ ಸಮುದಾಯಗಳಾಗಿವೆ, ಅವುಗಳನ್ನು ಉಪ ಜಾತಿಗಳಾಗಿ ಒಡೆಯುವ ಕೆಲಸವನ್ನು ಯಾವ ಸರ್ಕಾರಗಳು ಮಾಡಬಾರದು, ಈ ಎರಡು ಸಮುದಾಯ ಗಳಲ್ಲಿ ಬಹುತೇಕ ಜನರು ಬಡತನದಲ್ಲಿ ಇದ್ದಾರೆ ಅಂತಹವರಿಗೆ ಹಿಂದುಳಿದ ಮೀಸಲಾತಿ ಕಲ್ಪಿಸಬೇಕಾದ್ದು ಸರ್ಕಾರಗಳ ಕರ್ತವ್ಯ ಈಗಾಗಲೆ ಸರ್ಕಾರವು ಈ ಕೆಲಸ ಮಾಡಿದ್ದು ಅದು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ, ಜನವರಿ 31 ರಂದು ನ್ಯಾಯಾಲಯದಲ್ಲಿ ಇದರ ತೀರ್ಮಾನವಾಗಲಿದ್ದು ಎರಡು ಸಮುದಾಯಕ್ಕೂ ನ್ಯಾಯಯುತ ಮೀಸಲಾತಿ ದೊರೆಯುವ ವಿಶ್ವಾಸವಿದೆ ಎಂದರು.

ಒಕ್ಕಲಿಗ ಸಮುದಾಯದ ಉಪ ಜಾತಿಯಾದ ಕುಂಚಿಟಿಗ ಸಮುದಾಯದ ಒಬಿಸಿ ಮೀಸಲಾತಿ ಸರ್ಕಾರದಲ್ಲಿದ್ದು ಕೂಡಲೆ ಅದನ್ನು ಕೇಂದ್ರ ಸರ್ಕಾರವು ಜಾರಿಗೊಳಿಸ ಬೇಕಿದೆ ಇದಕ್ಕೆ ರಾಜ್ಯಸರ್ಕಾರವು ಸಹ ಒತ್ತಡ ಹಾಕಬೇಕಿದೆ, ಅದೇ ರೀತಿಯಾಗಿ ಬಲಿಜ ಸಮುದಾಯಕ್ಕೆ1994 ರಲ್ಲಿ ಅವರಿಗಿದ್ದ 2ಎ ಮೀಸಲಾತಿಯನ್ನು ಅಂದಿನ ಸರ್ಕಾರ ಯಾವುದೇ ಮಾನ ದಂಡವಿಲ್ಲದೆ ತೆಗೆದು ಹಾಕಿ 2ಎ ಗೆ ಸೇರ್ಪಡೆ ಮಾಡಿರುತ್ತಾರೆ, ರಾಜ್ಯದಲ್ಲಿ ದೊಡ್ಡ ಸಮುದಾಯವಾದ ಬಲಿಜ ಸಮುದಾಯವು ಮತ್ತೆ 2ಎ ಮೀಸಲಾತಿಯನ್ನು ಹಿಂತಿರುಗಿಸುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದಾರೆ, ಈ ಹೋರಾಟಕ್ಕೆ ನನ್ನ ಬೆಂಬಲವಿದ್ದು ಸಂಭಂದ ಪಟ್ಟ ಸಚಿವರೊಂದಿಗೆ ಮಾತನಾಡುತ್ತೇವೆ. ಶೋಷಿತ ಸಮುದಾಯಗಳು ಯಾವುದೇ ಸರ್ಕಾರಗಳು ಅನ್ಯಾಯ ಮಾಡಬಾರದು ಎಂದರು.

ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಬಲಿಜ ಸಮುದಾಯ 2ಎ ಮೀಸಲಾತಿಗಾಗಿ ಜ.27 ರಂದು ಹಮ್ಮಿಕೊಂಡಿರುವ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲವಿದ್ದು ಸರ್ಕಾರ ತಕ್ಷಣ ಬಲಿಜ ಸಮುದಾಯದ ಮೀಸಲಾತಿ ನೀಡಬೇಕೆಂದು ಪಟ್ಟನಾಯ್ಕನಹಳ್ಳಿ ನಂಜಾವಧೂತ ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ತಾಲೂಕು ಒಕ್ಕಲಿಗ ಜಾಗೃತಿ ಸಂಘದ ಅಧ್ಯಕ್ಷ ವಿ.ಕೆ.ವೀರಕ್ಯಾತರಾಯ, ಖಜಾಂಚಿ ಉಮೇಶ್, ಮುಖಂಡರುಗಳಾದ ಬಸವರಾಜು, ಸಂತೋಷಗೌಡ, ನಾಗರಾಜು, ರಾಮಸ್ವಾಮಿ, ಸತೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next