Advertisement

ರಿಚ್ಚಿ ಹಾಡಿಗೆ ಧ್ವನಿಯಾದ ಕುನಾಲ್‌ ಗಾಂಜಾವಾಲ

05:59 PM May 10, 2023 | Team Udayavani |

ನವ ನಟ ರಿಚ್ಚಿ (ಹೇಮಂತ್‌ ಕುಮಾರ್‌) ನಾಯಕನಾಗಿ ಅಭಿನಯಿಸಿ, ನಿರ್ಮಿಸಿ, ನಿರ್ದೇಶಿಸಿರುವ “ರಿಚ್ಚಿ’ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ “ರಿಚ್ಚಿ’ ಚಿತ್ರತಂಡ, ನಿಧಾನವಾಗಿ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದ್ದು, ಇದೇ ಮೇ. 18ರಂದು “ರಿಚ್ಚಿ’ಯ ಮೊದಲ ಹಾಡನ್ನು ಬಿಡುಗಡೆ ಮಾಡುವ ಪ್ಲಾನ್‌ನಲ್ಲಿದೆ.

Advertisement

“ರಿಚ್ಚಿ’ ಸಿನಿಮಾದ ಮೊದಲ ರೊಮ್ಯಾಂಟಿಕ್‌ ಹಾಡಿಗೆ ಖ್ಯಾತ ಗಾಯಕ ಕುನಾಲ್‌ ಗಾಂಜಾವಾಲ ಧ್ವನಿಯಾಗಿದ್ದಾರೆ. ಈ ಹಾಡಿನಲ್ಲಿ ನಾಯಕ ರಿಚ್ಚಿ ಮತ್ತು ನಾಯಕಿ ರಮೋಲಾ ಕಾಣಿಸಿಕೊಂಡಿದ್ದು, ಚಿನ್ನಿ ಪ್ರಕಾಶ್‌ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ.

ಇನ್ನು “ರಿಚ್ಚಿ’ ಸಿನಿಮಾದ ಮೊದಲ ಹಾಡಿನ ಬಗ್ಗೆ ಮಾತನಾಡುವ ನಾಯಕ ಕಂ ನಿರ್ದೇಶಕ ರಿಚ್ಚಿ, “ಇದೊಂದು ಕಂಪ್ಲೀಟ್‌ ಲವ್‌ ಕಂ ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯ ಸಿನಿಮಾ. ಆದರೂ ಸಿನಿಮಾದ ಹಾಡುಗಳಿಗೆ ಅದರದ್ದೇ ಆದ ಮಹತ್ವವಿದೆ. ಅಗಸ್ತ್ಯ ಸಂತೋಷ್‌ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಮೊದಲ ಹಾಡಿಗೆ ಕುನಾಲ್‌ ಗಾಂಜಾವಾಲಾ ಧ್ವನಿಯಾಗಿದ್ದಾರೆ. ಬಹಳ ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದ ಕುನಾಲ್‌ ಗಾಂಜಾವಾಲಾ ಈ ಹಾಡಿನ ಮೂಲಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಇದೊಂದು ರೊಮ್ಯಾಂಟಿಕ್‌ ಶೈಲಿಯ ಗೀತೆಯಾಗಿದ್ದು, ಇಂದಿನ ಆಡಿಯನ್ಸ್‌ಗೆ ಇಷ್ಟವಾಗುವಂತೆ ಹಾಡು ಮತ್ತು ಸಿನಿಮಾ ಮಾಡಿದ್ದೇವೆ’ ಎಂದು ಭರವಸೆಯ ಮಾತುಗಳನ್ನಾಡುತ್ತಾರೆ.

ಅಂದಹಾಗೆ, ಸದ್ಯಕ್ಕೆ ಹಾಡುಗಳ ಮೂಲಕ ಪ್ರಚಾರ ಕಾರ್ಯ ಶುರು ಮಾಡಿರುವ “ರಿಚ್ಚಿ’ ಸಿನಿಮಾವನ್ನು ಇದೇ ಜೂನ್‌ ಅಥವಾ ಜುಲೈ ವೇಳೆಗೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next