Advertisement

ಕುಂಪಲ ಸರಕಾರಿ ಶಾಲೆಗೆ ಸಹ್ಯಾದ್ರಿ ಕಾಲೇಜಿನಿಂದ ಬಣ್ಣ ಬಳಿದು ಹೊಸ ರೂಪ

11:13 PM May 06, 2019 | Team Udayavani |

ಮಹಾನಗರ: ಸಹ್ಯಾದ್ರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌, ಎನ್‌ಎಸ್‌ಎಸ್‌ ಎನ್‌ಎಸ್‌ಎಸ್‌ ಘಟಕ ಮತ್ತು ಇಂಡಿಗೋ ಪೇಂಟ್ಸ್‌ ಸಹಯೋಗದೊಂದಿಗೆ ಕುಂಪಲದ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ಬಳಿದು ಹೊಸ ರೂಪ ನೀಡಲಾಯಿತು.

Advertisement

ಹೊಸ ಶೈಕ್ಷಣಿಕ ವರ್ಷಕ್ಕೆ ಸೇರುವ ವಿದ್ಯಾರ್ಥಿಗಳಿಗೆ ಕಲಿಕೆ ಪರಿಸರ. ಈ ಉದಾತ್ತ ಪ್ರಯತ್ನಕ್ಕಾಗಿ ಈ ಯೋಜನೆಗೆ ಅಗತ್ಯವಿರುವ ಬಣ್ಣಗಳನ್ನು ಇಂಡಿಗೋ ಪೇಂಟ್ಸ್‌ ದೇಣಿಗೆ ನೀಡುವ ಮೂಲಕ ಕೈ ಜೋಡಿಸಿವೆ. ಸ್ಥಳೀಯ ಆಡಳಿತ, ಯುವ ಕ್ಲಬ್‌ ಮತ್ತು ಸ್ವಸಹಾಯ ಗುಂಪು ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್‌ ಕೂಡ ತಮ್ಮ ಬೆಂಬಲವನ್ನು ವಿಸ್ತರಿಸಿದೆ.

ಸಹ್ಯಾದ್ರಿ ಕಾಲೇಜ್‌ ಎನ್‌ಎಸ್‌ಎಸ್‌ ಸ್ವಯಂಸೇವಕರು ತಮ್ಮ ಎಂಬಿಎ ವಿದ್ಯಾರ್ಥಿಗಳೊಂದಿಗೆ ಶಾಲೆಯ ಪರಿಸರ ಮತ್ತು ಒಳಾಂಗಣವನ್ನು ಶುಚಿಗೊಳಿಸಿದರು ಹಾಗೂ ಶಾಲೆಗೆ ಬಣ್ಣ ಬಳಿದರು. ಈ ಯೋಜನೆಯು ಸೋಮವಾರ ಆರಂಭವಾಗಿದ್ದು, ಮೇ 11ರ ವರೆಗೆ ಎನ್‌ಎಸ್‌ಎಸ್‌ ಸ್ಪೆಶಲ್‌ ಕ್ಯಾಂಪ್‌ನ ಭಾಗವಾಗಿ ಪೂರ್ಣಗೊಳ್ಳಲಿದೆ.

ಈ ಯೋಜನೆಯನ್ನು ಎನ್‌.ಎಸ್‌.ಎಸ್‌. ಕಾರ್ಯಕ್ರಮ ಸಂಯೋಜಕಿ ಶ್ರೀಲತಾ ಯು.ಎ., ವಿದ್ಯಾರ್ಥಿ ಕೌನ್ಸೆಲರ್‌ ಅಂಕಿತ್‌ ಎಸ್‌.ಕುಮಾರ್‌ ಮತ್ತು ಆರ್ಟ್ಸ್ ಆ್ಯಂಡ್‌ ಕಲ್ಚರ್‌ ವಿಭಾಗ ಮುಖ್ಯಸ್ಥ ನವೀನ್‌ ಪಿಲಾರ್‌ ಮೇಲುಸ್ತುವಾಗಿ ನೋಡಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next