Advertisement

Kumbra: ಶಾಲೆ, ಸರಕಾರಿ ಕಚೇರಿಗಳಲ್ಲಿ ಸರಣಿ ಕಳ್ಳತನ

12:17 AM Sep 06, 2023 | Team Udayavani |

ಪುತ್ತೂರು: ಕುಂಬ್ರದಲ್ಲಿ ಸೋಮವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು ಮಂಗಳವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.

Advertisement

ಒಳಮೊಗ್ರು ಗ್ರಾ.ಪಂ. ಕಚೇರಿ, ಗ್ರಾಮ ಆಡಳಿತಾಧಿಕಾರಿ ಕಚೇರಿ, ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಗೆ ಕಳ್ಳರು ಬಾಗಿಲು ಒಡೆದು ಒಳ ನುಗ್ಗಿದ್ದಾರೆ.

ಗ್ರಾ.ಪಂ ಕಚೇರಿಯಲ್ಲಿದ್ದ 7 ಸಾವಿರ ರೂ. ಮೌಲ್ಯದ ಸಿಸಿ ಕೆಮರಾದ ಡಿವಿಆರ್‌ ಕದ್ದೊಯ್ದಿದ್ದಾರೆ. ಗ್ರಾಮ ಕರಣಿಕ ಕಚೇರಿಯ ಪೀಠೊಪಕರಣಗಳಿಗೆ ಹಾನಿ ಎಸಗಿದ್ದಾರೆ.

ಕುಂಬ್ರ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗೆ ನುಗ್ಗಿರುವ ಕಳ್ಳರು ಉಪ ಪ್ರಾಂಶುಪಾಲರ ಕೊಠಡಿಯ ಬೀಗ ಮುರಿದು ಒಳ ಪ್ರವೇಶಿಸಿದ್ದಾರೆ.

ಮೂರು ಅಲ್ಮೇರಾಗಳ ಬಾಗಿಲು ತೆರೆದಿದ್ದು 10 ಸಾವಿರ ನಗದು ಹಾಗೂ 15 ಸಾವಿರ ಮೌಲ್ಯದ 3 ಡಿವಿಆರ್‌ಗಳನ್ನು ಕಳವು ಮಾಡಿದ್ದಾರೆ.

Advertisement

ಕೆಪಿಎಸ್‌ ಪ್ರಾಥಮಿಕ ಶಾಲೆಯ ಏಳು ಅಲ್ಮೇರಾ, ಟೇಬಲ್‌ಗ‌ಳನ್ನು ಜಾಲಾಡಿದ್ದಾರೆ.ಶ್ವಾನದಳ ಹಾಗೂ ಬೆರಳಚ್ಚು ತಜ್ಞ ಸಚಿನ್‌ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಂಪ್ಯ ಠಾಣೆ ಎಸ್‌ಐ ಧನಂಜಯ ಮತ್ತು ಸಿಬಂದಿ ಪರಿಶೀಲಿಸಿದ್ದಾರೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next