ಪುತ್ತೂರು : ಕುಂಬ್ರ ಜಂಕ್ಷನ್ ಬಳಿ ಅಳವಡಿಸಲಾಗಿದ್ದ ಎಸ್‌ಡಿಪಿಐ ಪಕ್ಷದ ಚುನಾವಣ ಪ್ರಚಾರದ ಬ್ಯಾನರನ್ನು ಮಾ.15ರಂದು ರಾತ್ರಿ ಕಳ್ಳತನ ಮಾಡಿರುವ ಕುರಿತು ಸಂಪ್ಯ ಠಾಣೆಗೆ ದೂರು ನೀಡಲಾಗಿದೆ.
Advertisement
ಒಳಮೊಗ್ರು ಗ್ರಾ.ಪಂ.ನಿಂದ ಅನುಮತಿ ಪಡೆದು ಕುಂಬ್ರದಲ್ಲಿ ಬ್ಯಾನರ್ ಅಳವಡಿಸಿದ್ದು ಬ್ಯಾನರ್ ಕಳ್ಳತನ ನಡೆಸಿರುವವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎಸ್‌ಡಿಪಿಐ ಕುಂಬ್ರ ಬ್ಲಾಕ್ ಅಧ್ಯಕ್ಷ ಮಹಮ್ಮದ್ ದೂರು ನೀಡಿದ್ದಾರೆ.