Advertisement

ಕುಂಬಳೆ : ನೇಣು ಬಿಗಿದ ಸ್ಥಿತಿಯಲಿ ಪೊಲೀಸ್‌ ಅಧಿಕಾರಿಯ ಮೃತದೇಹ ಪತ್ತೆ

01:25 AM Jun 30, 2022 | Team Udayavani |

ಕುಂಬಳೆ : ಪೊಲೀಸ್‌ ಅಧಿಕಾರಿಯ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.

Advertisement

ಕಾಸರಗೋಡು ಸ್ಪೆಶಲ್‌  ಬ್ರಾಂಚ್‌ ಎಎಸ್‌ಐ ಅಬ್ದುಲ್‌ ಅನೀಸ್‌ (48) ಅವರ ಮೃತದೇಹವು ಪರಪ್ಪದಲ್ಲಿರುವ ಮನೆಯಲ್ಲಿ ಕಂಡುಬಂದಿದೆ. ಅವರು ಕೆಲವು ದಿನಗಳಿಂದ ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದರೆಂದು ಹೇಳಲಾಗಿದ್ದು, ಸಾವಿನ ಬಗ್ಗೆ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ವೆಳ್ಳರಿಕುಂಡು, ರಾಜಪುರಂ ಸಹಿತ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಎಎಸ್‌ಐಯಾಗಿ ಭಡ್ತಿ ಹೊಂದಿ ಸ್ಪೆಷಲ್‌ ಬ್ರಾಂಚಿಗೆ ವರ್ಗಾವಣೆಗೊಂಡಿದ್ದರು. ಮುಹಮ್ಮದ್‌ ಹಲೀಮಾ ದಂಪತಿ ಪುತ್ರರಾದ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next