Advertisement

Kumbha Mela: ಉತ್ತರ ಪ್ರದೇಶದಲ್ಲಿ 6 ತಿಂಗಳು ಮುಷ್ಕರ ಬಂದ್‌

03:18 AM Dec 08, 2024 | Team Udayavani |

ಲಕ್ನೋ: ಜನವರಿಯಲ್ಲಿ ಮಹಾ ಕುಂಭಮೇಳ ನಡೆಯಲಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಎಸ್ಮಾ (ಅಗತ್ಯ ವಸ್ತುಗಳ ಸೇವಾ ಕಾಯ್ದೆ) ಜಾರಿಗೊಳಿಸಲಾಗಿದ್ದು, ಮುಂದಿನ 6 ತಿಂಗಳ ಕಾಲ ಸರಕಾರಿ ಇಲಾಖೆಗಳು, ನಗರ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ನೌಕರರು ಹೋರಾಟ, ಪ್ರತಿಭಟನೆ ನಡೆಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

Advertisement

ಭಕ್ತರು ಮತ್ತು ಸ್ಥಳೀಯ ನಿವಾಸಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿ­­ಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತಾರೂಢ ಬಿಜೆಪಿ ಸರಕಾರದ ನಡೆಯನ್ನು ಸಮರ್ಥಿಸಿಕೊಂಡಿದೆ. ಆದರೆ ಎಸ್ಮಾ ಜಾರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷ, ಇದು ಪ್ರಜಾಸತ್ತಾತ್ಮಕವಲ್ಲದ ನಡೆ ಎಂದು ಬಣ್ಣಿಸಿದೆ. ಜನರು ಮತ್ತು ಸರಕಾರಿ ನೌಕರರಿಗೆ ತಮ್ಮ ನಡೆ ಹೊರಹಾಕಲು ಸಂವಿಧಾನವೇ ಅವಕಾಶ ಕಲ್ಪಿಸಿದೆ. ಆದರೆ ಸರಕಾರಕ್ಕೆ ಇದು ಅಗತ್ಯವಿದ್ದಂತೆ ಕಾಣುತ್ತಿಲ್ಲ ಎಂದಿದೆ.

ಮದ್ಯ, ಮಾಂಸ ಪೂರ್ಣ ನಿಷೇಧ
ಕುಂಭಮೇಳದ ಹಿನ್ನೆಲೆಯಲ್ಲಿ ಪ್ರಯಾಗ್‌ರಾಜ್‌ನಲ್ಲಿ ಮದ್ಯ ಹಾಗೂ ಮಾಂಸಕ್ಕೆ ನಿಷೇಧ ಹೇರಲಾಗಿದೆ. ಸಾರ್ವಜನಿಕರು ಮಾತ್ರವಲ್ಲದೇ ಪೊಲೀಸ್‌ ಸಿಬಂದಿಗೂ ಇದು ಅನ್ವಯವಾಗುತ್ತದೆ. ಪೊಲೀಸ್‌ ಮೆಸ್‌ಗಳಲ್ಲಿ ಸಿದ್ಧಪಡಿಸಲಾಗುವ ಆಹಾರಗಳು ಕೂಡ ಶುದ್ಧ ಸಸ್ಯಾಹಾರಿಯೇ ಆಗಿರಬೇಕು ಎಂದು ಸೂಚಿಸಲಾಗಿದೆ. ಕುಂಭಮೇಳವು ಜ.13ರಿಂದ ಫೆ.26ರ ವರೆಗೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next