Advertisement

ಕುಂಭಾಸಿ : ಲೋಕ ಕಲ್ಯಾಣಾರ್ಥವಾಗಿ ಶ್ರೀ ಧನ್ವಂತರಿ ಮಹಾಜಪ ಪಠಣ ಹಾಗೂ ಹೋಮ

09:16 AM Mar 30, 2020 | sudhir |

ತೆಕ್ಕಟ್ಟೆ:ವಿಶ್ವದಾದ್ಯಂತ ಹಬ್ಬಿರುವ ವಿನಾಶಕಕಾರಿ ಕೋವಿಡ್ ನಿರ್ಮೂನೆಗಾಗಿ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲದಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಶ್ರೇಯೋಭಿವೃದ್ಧಿ, ಭಾರತದ ರಾಜಾಂಗ ಕಾರ್ಯ, ದೂರ ಸಂಚಾರ ವ್ಯವಸ್ಥೆ, ವಿತ್ತ ವ್ಯಾಪಾರ ವ್ಯವಹಾರ, ದೇಗುಲದಲ್ಲಿ ಧಾರ್ಮಿಕ ಕಾರ್ಯ , ವಿದ್ಯಾಲಯ, ರೈತಾಪಿ ಜನತೆಯ ಕೃಷಿ, ರಾಷ್ಟ್ರಪತಿ, ಪ್ರಧಾನಿ, ಯೋಧರು , ವೈದ್ಯರು, ಆರೋಗ್ಯ ಸಿಬಂದಿ, ಪೊಲೀಸ್‌ ಇಲಾಖೆ, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಸಕಲ ಜೀವ ಸಂಕುಲಕ್ಕೂ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಒಳ್ಳೆಯ ಆರೋಗ್ಯ ಹಾಗು ಸ್ವ ಕರ್ತವ್ಯದಲ್ಲಿ ರೋಗ ರಹಿತವಾಗಿ ತೊಡಗಿಸಿಕೊಳ್ಳಬೇಕು ಎನ್ನುವ ನಿಟ್ಟಿನಿಂದ ಶ್ರೀ ಸನ್ನಿಧಿಯಲ್ಲಿ ಶ್ರೀ ಧನ್ವಂತರಿ ಮಹಾಜಪ , ಧನ್ವಂತರಿ ಹೋಮ, ವೇದ ಪಾರಾಯಣ, ಚಂಡಿಕಾ ಪಾರಾಯಣವು ದೇವಳದ ಪ್ರಧಾನ ಅರ್ಚಕ ಅನಂತ ಪುರಾಣಿಕ್‌ ಮಾರ್ಗದರ್ಶನದಲ್ಲಿ ಮಾ.27 ರಂದು ನಡೆಯಿತು.

Advertisement

ಈ ಸಂದರ್ಭದಲ್ಲಿ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲದ ಆಡಳಿತ ಧರ್ಮದರ್ಶಿ ದೇವರಾಯ ಮಂಜುನಾಥ ಶೇರೆಗಾರ ,ಅರ್ಚಕ ಸುಬ್ರಹ್ಮಣ್ಯ ಹೆಬ್ಟಾರ್‌, ಪ್ರಸನ್ನ ಉಪಾಧ್ಯಾಯ, ಸುಮುಖ ಭಟ್‌, ಶ್ರೀಕಾಂತ್‌ ಭಟ್‌, ದೇವಳದ ಆಡಳಿತ ಮಂಡಳಿಯ ಮುಖ್ಯಸ್ಥ ರಾಜಶೇಖರ್‌ ಹೆಗ್ಡೆ ಮತ್ತಿತರರು ಉಪಸ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next